Publish Date: Fri, 06 Mar 2020 (17:10 IST)
Updated Date: Fri, 06 Mar 2020 (17:12 IST)
ರಾಜ್ಯದ ಪ್ರಮುಖ ಸ್ವಾಮೀಜಿಯೊಬ್ಬರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ಈ ರಾಜ್ಯದ ಮುಖ್ಯಮಂತ್ರಿ ಆಗ್ತಾರೆ ಅಂತ ಭವಿಷ್ಯ ನುಡಿದಿದ್ದಾರೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುವ ದಿನಗಳು ಬರುತ್ತಿವೆ ಅಂತ ನಂಜಾವಧೂತ ಸ್ವಾಮೀಜಿ ಭವಿಷ್ಯ ಹೇಳಿದ್ದಾರೆ.
ರಾಮನಗರದ ದೊಡ್ಡಮಳೂರಿನಲ್ಲಿ ಏರ್ಪಡಿಸಿದ್ದ ಬಮೂಲ್ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಮುಖ್ಯಮಂತ್ರಿ ಎಂದರೆ ಅವರು ಹೆಚ್.ಡಿ. ಕುಮಾರಸ್ವಾಮಿ ಮಾತ್ರ ಎಂದರು.
ಹೆಚ್.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಉತ್ತಮ ಕೆಲಸ ಮಾಡಿದ್ದಾರೆ. ಆದರೆ, ಕೆಲಸ ಕಾರ್ಯಗಳಿಗೆ ಸರಿಯಾಗಿ ಪ್ರಚಾರ ಸಿಗಲಿಲ್ಲ ಎಂದರು.
ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಕುಮಾರಸ್ವಾಮಿ ಯಾವ ತೊಂದರೆಗಳನ್ನೂ ಕೊಡೋದಿಲ್ಲ ಅಂತ ನಂಜಾವಧೂತರು ಹೇಳಿದ್ದಾರೆ.