Publish Date: Fri, 10 Apr 2026 (15:49 IST)
Updated Date: Fri, 10 Apr 2026 (15:54 IST)
ಮೈಸೂರು: ಹಣ ವಸೂಲಿ ಮಾಡಲು ಸಿದ್ದರಾಮಯ್ಯನವರು ತಮ್ಮ ಮಗನನ್ನೇ ನೇಮಕ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಇಂದು ಕುಮಾರಸ್ವಾಮಿ ಅವರು ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಮಗನ ವಸೂಲಿ ಹೇಗಿದೆ ಎಂಬುದು ಎಲ್ಲಾ ಅಧಿಕಾರಿಗಳಿಗೆ ಗೊತ್ತಿದೆ. ಇನ್ನೂ ಸಿದ್ದರಾಮಯ್ಯನವರಿಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯಿಲ್ಲ. ಇನ್ನೂ ಜನ ಆಪೇಕ್ಷಿಸಿದಂತೆ ನಿಖಿಲ್ ರಾಜಕೀಯಕ್ಕೆ ಬಂದಿದ್ದಾರೆಂದು ಎಂದು ಕೌಂಟರ್ ನೀಡಿದರು.
1999 ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸಮೇತ ನಾವೆಲ್ಲಾ ಸೋತಿದ್ದೆವು. ಆಗ ಸಿದ್ದರಾಮಯ್ಯ, ಮಹಾದೇವಪ್ಪ ಇಬ್ಬರೂ ದೇವೇಗೌಡರ ಮನೆಗೆ ಬಂದಿದ್ದರು. ಆ ಸಂದರ್ಭದಲ್ಲಿ ರಾಜಕೀಯ ನನಗೆ ಸಾಕೆಂದು ಕಣ್ಣೀರು ಹಾಕಿದ್ದರು. ಅವತ್ತು ಆ ಕಣ್ಣೀರಿಗೆ ಬಕೆಟ್ ಇಡುತ್ತಿದ್ದರೆ ತುಂಬುತ್ತಿತ್ತು ಎಂದು ಟೀಕೆ ಮಾಡಿದರು.
ಆ ಸಂದರ್ಭದಲ್ಲಿ ದೇವೇಗೌಡರು ಸಮಾಧಾನ ಮಾಡಿ ಧೈರ್ಯ ತುಂಬಿದ್ದರು. ಇದನ್ನು ಸಿದ್ದರಾಮಯ್ಯ ಮರೆತಿದ್ದಾರೆಂದು ಕುಟುಕಿದರು.
ಇನ್ನೂ 2006 ರಲ್ಲಿ ಸಿದ್ದರಾಮಯ್ಯ ಅಹಿಂದ ಹೆಸರಲ್ಲಿ ನಮ್ಮ ಪಕ್ಷಕ್ಕೆ ಚೂರಿ ಹಾಕಿದ್ರು. ಸಿದ್ದರಾಮಯ್ಯ ನಮ್ಮ ಪಕ್ಷ ಬಿಟ್ಟಾಗ ಅವರ ಜೊತೆ ಹೋದವರು ಬರೀ 8 ಜನ. ಇದೆಲ್ಲಾ ಸಿದ್ದರಾಮಯ್ಯಗೆ ನೆನಪಿಲ್ವಾ ಎಂದು ಪ್ರಶ್ನೆ ಮಾಡಿದರು.
Sampriya
Publish Date: Fri, 10 Apr 2026 (15:49 IST)
Updated Date: Fri, 10 Apr 2026 (15:54 IST)