Select Your Language

Notifications

webdunia
webdunia
webdunia
webdunia

ಮುಡಾ ಹಗರಣ ಹೊರಹಾಕಿದ್ದ ಕಾಂಗ್ರೆಸ್ ಅಧ್ಯಕ್ಷರೇ: ಡಿಕೆಶಿ ವಿರುದ್ಧ ಕುಮಾರಸ್ವಾಮಿ ಆರೋಪ

HD Kumaraswamy

Krishnaveni K

ಬೆಂಗಳೂರು , ಶುಕ್ರವಾರ, 5 ಜುಲೈ 2024 (12:19 IST)
ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ಕುರಿತಂತೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪರೋಕ್ಷವಾಗಿ ಡಿಕೆ ಶಿವಕುಮಾರ್ ಗೆ ತಿವಿದಿದ್ದಾರೆ.
 

ಇಷ್ಟು ದಿನ ಸಿಡಿ ಫ್ಯಾಕ್ಟರಿ ನಡೆಯುತ್ತಿತ್ತು, ಇದೀಗ ಮುಡಾ ಫ್ಯಾಕ್ಟರಿ ಶುರುವಾಗಿದೆ. ಇದೆಲ್ಲದರ ರೂವಾರಿ ಅವರ ಪಕ್ಷದ ಅಧ್ಯಕ್ಷರೇ ಎಂದು ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಎಲ್ಲವೂ ಸಿಎಂ ಸಿದ್ದರಾಮಯ್ಯಗೆ ಮುಡಾ ಹಗರಣ ಮುಳುವಾಗಿದೆ.

ತಮ್ಮ ಮೇಲೆ ಬೆಂಬಲಿಗರನ್ನು ಛೂ ಬಿಟ್ಟು ಕತ್ತಿ ಮಸೆಯುತ್ತಿದ್ದ ಸಿದ್ದರಾಮಯ್ಯ ವಿರುದ್ಧ ಡಿಕೆ ಶಿವಕುಮಾರ್ ಅವರೇ ಈ ಕೆಲಸ ಮಾಡಿಸಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ. ಇಲ್ಲ ಅಂದರೆ ಇಷ್ಟು ದಿನ ಹೊರಬಾರದ ಹಗರಣ ಈಗ ಹೊರ ಬರಲು ಕಾರಣವೇನು ಎಂದು ಅವರು ಚುಚ್ಚಿದ್ದಾರೆ.

ಬಿಜೆಪಿಯವರು ಹಗರಣದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆದರೆ ಈ ಹಗರಣ ಹೊರಬೀಳಲು ಕಾಂಗ್ರೆಸ್ ನವರದ್ದೇ ಕುಮ್ಮಕ್ಕು ಇದೆ. ಈ ಬಗ್ಗೆ ನನಗೆ ಮಾಹಿತಿಯಿದೆ. ಸಿದ್ದರಾಮಯ್ಯಗೆ ಸೈಟು ಹೇಗೆ ಬಂತು ಎಂದು ನನಗೆ ಗೊತ್ತಿದೆ. 62 ಕೋಟಿ ರೂ. ಪರಿಹಾರ ಕೊಡಿ ಎನ್ನುತ್ತಿರುವ ಸಿದ್ದರಾಮಯ್ಯ ಮೊದಲು ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರ ಕೊಡಿಸಲಿ ಎಂದು ಕುಮಾರಸ್ವಾಮು ಸವಾಲು ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಡಾ ಹಗರಣ ಬಯಲು ಮಾಡಿದ್ದ ಮೈಸೂರು ಡಿಸಿ ಕೆವಿ ರಾಜೇಂದ್ರಗೆ ವರ್ಗದ ಶಿಕ್ಷೆ