ಬೆಂಗಳೂರು: ಬಿಎಸ್ ಯಡಿಯೂರಪ್ಪ ನೂತನ ಸಿಎಂ ಆಗಿ ಪದಗ್ರಹಣ ಮಾಡಿದ ಬೆನ್ನಲ್ಲೇ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಶುಭಾಷಯ ಕೋರಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದ್ದರು.
ಇಷ್ಟು ದಿನ ಕಾಂಗ್ರೆಸ್ ಜತೆ ಮೈತ್ರಿ ಸರ್ಕಾರದ ಪಾಲುದಾರನಾಗಿ ಇದೀಗ ಜೆಡಿಎಸ್ ಬಿಜೆಪಿ ಪರ ವಾಲಿರುವುದು ಯಾಕೆ ಎಂದು ಹಲವರು ಅಚ್ಚರಿಗೊಳಗಾಗಿದ್ದರು.
ಖಾಸಗಿ ಮಾಧ್ಯಮವೊಂದರ ವರದಿ ಪ್ರಕಾರ ಈ ಹಿಂದೆ ಅತೃಪ್ತರು ಬಂಡಾಯವೆದ್ದು ಮುಂಬೈಗೆ ಹೋದ ಸಂದರ್ಭದಲ್ಲಿ ದೇವೇಗೌಡರು ಸೋನಿಯಾ ಗಾಂಧಿ ಬಳಿ ನಿಮ್ಮವರೇ ಸಿಎಂ ಆಗಲಿ, ನಾವು ಬಾಹ್ಯ ಬೆಂಬಲ ಕೊಡುತ್ತೇವೆ. ಮುಂಬೈಗೆ ಹೋದವರನ್ನು ಕರೆಸಿ ಎಂದಿದ್ದರಂತೆ. ಆದರೆ ಸೋನಿಯಾ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಇದಕ್ಕೆ ಸೊಪ್ಪು ಹಾಕದೇ ಇದ್ದಿದ್ದು ದೇವೇಗೌಡರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
ಅದೇ ಸಿಟ್ಟಿನಿಂದಲೇ ದೇವೇಗೌಡರು ಈಗ ಬಿಜೆಪಿಗೆ ಬಾಹ್ಯ ಬೆಂಬಲ ಕೊಡುವ ರಾಜಕೀಯ ಲೆಕ್ಕಾಚಾರ ಹಾಕಿದ್ದಾರೆ ಎಂದು ವರದಿಯಾಗಿದೆ. ಆದರೆ ಬಿಜೆಪಿ ಮಾತ್ರ ನಮಗೆ ಜೆಡಿಎಸ್ ಬೆಂಬಲ ಬೇಕಿಲ್ಲ ಎನ್ನುತ್ತಿದ್ದಾರೆ.