Publish Date: Sun, 01 Jul 2018 (11:47 IST)
Updated Date: Sun, 01 Jul 2018 (11:48 IST)
ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಮತ್ತು ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಮಧ್ಯೆ ಉತ್ತಮ ಸ್ನೇಹ ಸಂಬಂಧವಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ದೇವೇಗೌಡರು, ತೆಲಂಗಾಣ ಸಿಎಂ ಭೇಟಿ ಮಾಡಲಿದ್ದಾರೆ.
ಆಪ್ತರ ಮದುವೆಗಾಗಿ ಹೈದರಾಬಾದ್ ಗೆ ತೆರಳಲಿರುವ ದೇವೇಗೌಡರು ಬಳಿಕ ಸಿಎಂ ಚಂದ್ರಶೇಖರ್ ರಾವ್ ಅವರನ್ನು ಭೇಟಿಯಾಗಲಿದ್ದಾರೆ. ಇದೊಂದು ಸೌಹಾರ್ದಯುತ ಭೇಟಿ ಎನ್ನಲಾಗುತ್ತಿದೆ.
ಹಾಗಿದ್ದರೂ ಈ ವೇಳೆ ಮುಂಬರುವ ಲೋಕಸಭೆ ಚುನಾವಣೆಗೆ ಪರಸ್ಪರ ಬೆಂಬಲ ಕೋರುವ ಉದ್ದೇಶವೂ ಇರಬಹುದು ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.