Select Your Language

Notifications

webdunia
webdunia
webdunia
webdunia

ಅನಗತ್ಯ ಖರ್ಚುಗಳಿಗೆ ನಿಮಗೆ ಹಣ ಕೊಡ್ಬೇಕಾ? ಸಂಸತ್ತಿನಲ್ಲಿ ಗುಡುಗಿದ ದೇವೇಗೌಡ

HDDevegowda

Krishnaveni K

ನವದೆಹಲಿ , ಬುಧವಾರ, 7 ಫೆಬ್ರವರಿ 2024 (09:29 IST)
Photo Courtesy: Twitter
ನವದೆಹಲಿ: ತೆರಿಗೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ದೆಹಲಿಯಲ್ಲಿ ಪ್ರತಿಭಟನೆಗೆ ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರಿಗೆ ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತಿರುಗೇಟು ನೀಡಿದ್ದಾರೆ.

ರಾಜ್ಯಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದ ದೇವೇಗೌಡರು ರಾಜ್ಯದ ಹಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಮೇಕೆದಾಟು ಯೋಜನೆಗೆ ಹಣ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಜೊತೆಗೆ ಕರ್ನಾಟಕ ಕಾಂಗ್ರೆಸ್ ದೆಹಲಿಯ ಜಂತರ್ ಮಂಥರ್ ನಲ್ಲಿ ನಡೆಸಲುದ್ದೇಶಿಸಿರುವ ಹೋರಾಟದ ಬಗ್ಗೆ ಮಾತನಾಡಿದ್ದಾರೆ.

ಡೆಲ್ಲಿ ಚಲೋ ಹೋರಾಟದ ಬಗ್ಗೆ ದೇವೇಗೌಡರು ಹೇಳಿದ್ದೇನು?
ದೆಹಲಿಯಲ್ಲಿ ನಮ್ಮ ರಾಜ್ಯದ ಕಾಂಗ್ರೆಸ್ ನಾಯಕರು ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಇದಕ್ಕೆ ನಮಗೂ ಆಹ್ವಾನ ನೀಡಿದ್ದಾರೆ. ಆದರೆ ಈ ಹೋರಾಟ ಯಾವ ಕಾರಣಕ್ಕೆ? ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ, ನೇಮಕಗಳ ಹೆಸರಿನಲ್ಲಿ ಅನಗತ್ಯ ಖರ್ಚು ಮಾಡುವುದಕ್ಕಾಗಿಯೇ? ಮೊದಲು ಇಂತಹ ಖರ್ಚುಗಳನ್ನು ನಿಲ್ಲಿಸಲಿ. ನಾನೂ ರಾಜ್ಯದ ಮುಖ್ಯಮಂತ್ರಿಯಾಗಿದ್ದೆ. ಆದರೆ ನನ್ನ ಕಾಲದಲ್ಲಿ ಒಬ್ಬರೇ ಒಬ್ಬರನ್ನು ಅನಗತ್ಯವಾಗಿ ನೇಮಿಸಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ಹೋರಾಟಕ್ಕೆ ತಿರುಗೇಟು ನೀಡಿದ್ದಾರೆ.

ದೇವೇಗೌಡರು ಮಾತಿನ ನಡುವೆ ಕರ್ನಾಟಕದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿದರು. ಆದರೆ ಮೋದಿ ಗ್ಯಾರಂಟಿ ಇದಕ್ಕಿಂತ ಭಿನ್ನವಾದುದು ಎಂದು ಸಮರ್ಥಿಸಿಕೊಂಡರು. ಈ ವೇಳೆ ಕಾಂಗ್ರೆಸ್ ಸಂಸದರಿಂದ ಆಕ್ರೋಶವೂ ವ್ಯಕ್ತವಾಯಿತು. ಈ ವೇಳೆ ಸ್ಪೀಕರ್ ಮಾಜಿ ಪ್ರಧಾನಿಗಳು ಮಾತನಾಡುತ್ತಿದ್ದಾರೆ. ಅವರ ಸ್ಥಾನಕ್ಕೆ ಗೌರವ ಕೊಡಿ. ಅವರ ಅಭಿಪ್ರಾಯ ಅವರು ಹೇಳಲಿ ಎಂದು ಸುಮ್ಮನಾಗಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ಇಂದು ಕಾಂಗ್ರೆಸ್ ದಿಲ್ಲಿ ಚಲೋ ಪ್ರತಿಭಟನೆ