Publish Date: Wed, 23 May 2018 (10:38 IST)
Updated Date: Wed, 23 May 2018 (10:39 IST)
ಬೆಂಗಳೂರು: ಮಗ ಮುಖ್ಯಮಂತ್ರಿಯಾಗುತ್ತಿದ್ದಾನೆಂದರೆ ಯಾರಿಗೆ ತಾನೇ ಖುಷಿಯಿರುವುದಿಲ್ಲ ಹೇಳಿ? ಸ್ವತಃ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರಿಗೂ ಅದೇ ಆಗಿದೆ.
ಫಲಿತಾಂಶ ಬಂದ ದಿನದಿಂದಲೂ ದೇವರ ಮೊರೆ ಹೋಗಿರುವ ಎಚ್ ಡಿ ದೇವೇಗೌಡ ನಿನ್ನೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಪುತ್ರರ ಜತೆ ಶೃಂಗೇರಿಗೆ ಭೇಟಿ ನೀಡಿದ್ದರು.
ಇಂದು ಮಗ ಕುಮಾರಸ್ವಾಮಿ ಪ್ರಮಾಣ ವಚನಕ್ಕೂ ಮೊದಲೂ ದೇವೇಗೌಡರು ಪೂಜೆಯಲ್ಲಿ ನಿರತರಾಗಿದ್ದಾರೆ. ಬೆಳಿಗ್ಗೆಯೇ ಜ್ಯೋತಿಷಿ ಜಯನಗರದ ಸಂಪತ್ ರವಿನಾರಾಯಣ ಮನೆಗೆ ಭೇಟಿ ನೀಡಿದ ದೊಡ್ಡ ಗೌಡರು ಪೂಜೆ ನೆರವೇರಿಸಿದ್ದಾರೆ. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಪುತ್ರ ಸಿಎಂ ಆಗುವುದನ್ನು ಕಣ್ಣಾರೆ ನೋಡಲಿದ್ದಾರೆ.
ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ತೃತೀಯ ರಂಗ ಸಿದ್ಧಪಡಿಸುವ ಬಗ್ಗೆ ಈಗಲೇ ಏನನ್ನೂ ಹೇಳಲಾಗದು ಎಂದು ಹೇಳಿದ್ದಾರೆ. ಇಂದು ಬಿಜೆಪಿ ವಿರೋಧಿ ಪಕ್ಷಗಳ ನಾಯಕರೆಲ್ಲರೂ ಕುಮಾರಸ್ವಾಮಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ದೇವೇಗೌಡರು ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.