Publish Date: Thu, 23 Jul 2026 (15:55 IST)
Updated Date: Thu, 23 Jul 2026 (15:58 IST)
ಬೆಂಗಳೂರು: ಎರಡು ಹಸು ಎರಡು ವರ್ಷ ಹಿಂದೆ ಕಳೆದು ಹೋಗಿದೆ ಎಂದು ಎರಡು ವರ್ಷದ ನಂತರ ಕ್ರಿಮಿನಲ್ ಕೇಸ್ ಹಾಕಿದ್ದಕ್ಕೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಎರಡು ಹಸು 2024 ರಲ್ಲಿ ಕಳೆದು ಹೋಗಿದೆ ಎಂದು ದೂರು ನೀಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಪೊಲೀಸರ ಕಾರ್ಯವೈಖರಿ ಬಗ್ಗೆ ಕೋರ್ಟ್ ನಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಎರಡು ಹಸು 2024 ರಲ್ಲಿ ಕಳೆದು ಹೋಗಿದೆ ಎಂದು 2026 ರಲ್ಲಿ ಕ್ರಿಮಿನಲ್ ಕೇಸ್ ರಿಜಿಸ್ಟರ್ ಮಾಡಿ ಅದಕ್ಕೆ ಇನ್ವೆಸ್ಟಿಗೇಷನ್, ಪೊಲೀಸ್ ಮೆಷಿನರಿ ಎಲ್ಲಾ ವೇಸ್ಟ್. ಇದು ಕ್ರಿಮಿನಲ್ ಜಸ್ಟಿಸ್ ಸಿಸ್ಟಂನ ದುರುಪಯೋಗ. ಎರಡು ಹಸು, 2024 ರಲ್ಲಿ ಕಳುವಾಗಿದೆ ಎಂದು 2026 ರಲ್ಲಿ ದೂರು. ಎಲ್ಲಾ ಪೊಲೀಸ್ ಮೆಷಿನರಿ ಪಶುಗಳ ಹುಡುಕಾಟದಲ್ಲಿ ಬ್ಯುಸಿ. ಯಾರಾದರೂ ಒಬ್ಬರನ್ನು ಕೊಲೆ ಮಾಡಿದ್ದಾರೆ ಎಂದು ಸ್ವಲ್ಪ ವೈಟ್ ಮಾಡಿ ಅವರು ಹಸು ಹುಡುಕುತ್ತಿದ್ದಾರೆ ಎನ್ನಬೇಕು. ಇದರಲ್ಲಿ ಹಸುಗಳದ್ದು ಪ್ರಾಬ್ಲಂ ಇಲ್ಲ, ನಿಮ್ದು ಪ್ರಾಬ್ಲಂ. 2 ವರ್ಷ ಆದ ಮೇಲೆ ನೀವು ಕೇಸ್ ದಾಖಲಿಸ್ತೀರಿ ಎಂದು ಜಡ್ಜ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇಲ್ಲಿದೆ ನೋಡಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ