Select Your Language

Notifications

webdunia
webdunia
webdunia
webdunia

ಹಾವೇರಿ, ಅಡುಗೆ ಮಾಡುವಾಗ ಸಾಂಬಾರು ಪಾತ್ರೆಗೆ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

ಹಾವೇರಿ ಅಪರಾಧ ಪ್ರಕರಣ

Sampriya

ಹಾವೇರಿ , ಗುರುವಾರ, 18 ಸೆಪ್ಟಂಬರ್ 2025 (21:03 IST)
ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕೆರೆಮಲ್ಲಾಪುರ ಗ್ರಾಮದಲ್ಲಿ ಬಿಸಿ ಸಾಂಬಾರ ಪಾತ್ರೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ನಿರ್ಮಲಾ ಮಂಜುನಾಥ ಚಿಕ್ಕಣ್ಣನವರು ಇಂದು ಸಾವನ್ನಪ್ಪಿದ್ದಾರೆ. 

ಹುಬ್ಬಳ್ಳಿಯ ಕೆಎಂಸಿ–ಆರ್‌ಐ (ಕಿಮ್ಸ್) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇನ್ನೂ ಮೃತಪಟ್ಟ ನಿರ್ಮಲಾ ಅವರ ತಂದೆ ಸಾವಿನ ಬಗ್ಗೆ ದೂರನ್ನು ನೀಡಿದ್ದಾರೆ. ಈ ಸಂಬಂಧ ರಾಣೆಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಪ್ರತಿಕ್ರಿಯಿಸಿ, ಅದರನ್ವಯ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದರು.


‘ನಿರ್ಮಲಾ ಅವರ ಮನೆಯಲ್ಲಿ ಆಗಸ್ಟ್ 8ರಂದು ಶುಕ್ರವಾರದ ಪೂಜೆ ಇತ್ತು. ಅದಕ್ಕಾಗಿ ಅವರು ಅಡುಗೆ ಸಿದ್ಧಪಡಿಸುತ್ತಿದ್ದರು. ಅಡುಗೆ ಮನೆಯ ಒಲೆಯ ಮೇಲೆ ದೊಡ್ಡ ಪಾತ್ರೆ ಇಟ್ಟು ಸಾಂಬಾರ ಮಾಡುತ್ತಿದ್ದರು. ಸಾಂಬಾರ ಕುದಿಯುತ್ತಿತ್ತು. ಅಡುಗೆ ಮಾಡುತ್ತಿದ್ದ ನಿರ್ಮಲಾ ಅವರು ಏಕಾಏಕಿ ತಲೆಚಕ್ರ ಬಂದು ಸಾಂಬಾರ ಪಾತ್ರೆಯೊಳಗೆ ಬಿದ್ದಿದ್ದರು. ಇದರಿಂದಾಗಿ ಅವರ ಮುಖ, ಎದೆ, ಎರಡು ಕೈಗಳು ಸುಟ್ಟಿದ್ದವು. ದೇಹದ ಹಲವು ಕಡೆಗಳಲ್ಲಿ ಬೆಂಕಿ ಹೊತ್ತಿಕೊಂಡು, ತೀವ್ರ ಗಾಯಗೊಂಡಿದ್ದರು. 

ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಕೆಎಂಸಿ–ಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಸೆಪ್ಟೆಂಬರ್ 17ರಂದು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಷನ್ ಸಿಂಧೂರ್‌ನಲ್ಲಿ ಸಾವನ್ನಪ್ಪಿದ ಉಗ್ರರರ ಅಂತ್ಯಕ್ರಿಯೆಯಲ್ಲಿ ಪಾಕ್ ಸೇನೆ ಭಾಗಿ