Select Your Language

Notifications

webdunia
webdunia
webdunia
webdunia

ಹಾವೇರಿ: ನೀಡದ ಬೆಡ್‌, ಕಾರಿಡಾರ್‌ನಲ್ಲೇ ಹೆರಿಗೆ, ನೆಲಕ್ಕೆ ಬಿದ್ದು ಶಿಶು ಸಾವು

Haveri District Hospital Negligency

Sampriya

ಹಾವೇರಿ , ಮಂಗಳವಾರ, 18 ನವೆಂಬರ್ 2025 (17:49 IST)
ಹಾವೇರಿ: ಇಂದು ಬೆಲಿಗ್ಗೆ ಇಲ್ಲಿಯ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು‌ ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಶುಶ್ರೂಷಕಿಯರ ನಿರ್ಲಕ್ಷ್ಯಕ್ಕೆ ಶಿಶು ಸಾವನ್ನಪ್ಪಿದ ಘಟನೆ ವರದಿಯಾಗಿದೆ. 

ಆಸ್ಪತ್ರೆಯಲ್ಲಿ ಬೆಡ್‌ ಇಲ್ಲದ ಕಾರಣ ಕಾರಿಡಾರ್‌ನಲ್ಲೇ ಮಹಿಳೆಯೊಬ್ಬರಿಗೆ ಹೆರಿಗೆ ಆಗಿದ್ದು, ನೆಲದ ಮೇಲೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಶಿಶು ಸ್ಥಳದಲ್ಲೇ ಮೃತಪಟ್ಟಿದೆ.

ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಆಸ್ಪತ್ರೆಯ ವೈದ್ಯರು ಹಾಗೂ ಶುಶ್ರೂಷಕಿಯರ ನಿರ್ಲಕ್ಷ್ಯವೇ ಘಟನೆಗೆ ಕಾರಣವೆಂದು ಮಹಿಳೆಯರ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ. 

ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದ ರೂಪಾ (30) ಅವರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ, ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಹೆರಿಗೆ ಕೊಠಡಿಯಲ್ಲಿ ಹೆಚ್ಚು ಮಹಿಳೆಯರಿದ್ದರು. ಹೀಗಾಗಿ, ಬೆಡ್‌ಗಳ ಕೊರತೆ ಇತ್ತು. ಮಹಿಳೆಗೆ ಬೆಡ್ ಸಿಕ್ಕಿರಲಿಲ್ಲ.

ತೀವ್ರವಾದ ಹೆರಿಗೆ ನೋವಿನಿಂದ ಬಳಲುತ್ತಿದ್ದ ರೂಪಾಗೆ ವೈದ್ಯರಾಗಲಿ ಶುಶ್ರೂಷಕಿಯರಾಗಲಿ ಬೆಡ್ ಕೊಡಿಸಲು ಮುಂದಾಗಿರಲಿಲ್ಲವೆಂದು ಸಂಬಂಧಿಕರು ದೂರಿದರು.

ಬೆಳಿಗ್ಗೆ 9 ಗಂಟೆ ಸುಮಾರಿಗೆ ಕಾರಿಡಾರ್‌ನಲ್ಲಿದ್ದ ಮಹಿಳೆ ಮೇಲಕ್ಕೆ ಎದ್ದು ಶೌಚಾಲಯದತ್ತ ಹೊರಟಿದ್ದರು. ಇದೇ ಸಂದರ್ಭದಲ್ಲಿ ಮಾರ್ಗಮಧ್ಯೆಯೇ ಹೆರಿಗೆ ಆಗಿದೆ. ಮಹಿಳೆ ನಡೆದುಕೊಂಡು ಹೋಗುವಾಗಲೇ ಹೆರಿಗೆ ಆಗಿದ್ದರಿಂದ, ಶಿಶು ನೆಲಕ್ಕೆ ಬಿದ್ದಿತ್ತು. ಅದರ ತಲೆಗೆ ತೀವ್ರ ಪೆಟ್ಟಾಗಿತ್ತು. ಹೀಗಾಗಿ, ಸ್ಥಳದಲ್ಲಿಯೇ ಶಿಶು ಮೃತಪಟ್ಟಿದೆ ಎಂದು ಸಂಬಂಧಿಕರು ತಿಳಿಸಿದರು‌.


Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಪಾರ್ವತಿ ಆರೋಗ್ಯ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿಎಂ ಸಿದ್ದರಾಮಯ್ಯ