Select Your Language

Notifications

webdunia
webdunia
webdunia
webdunia

ಹಾಸನ ಟ್ರಕ್ ದುರಂತದ ಇನ್ನೊಂದು ವಿಡಿಯೋ ಇಲ್ಲಿದೆ

Hassan

Krishnaveni K

ಹಾಸನ , ಶನಿವಾರ, 13 ಸೆಪ್ಟಂಬರ್ 2025 (10:14 IST)
Photo Credit: X
ಹಾಸನ: ಗಣೇಶ ಮೆರವಣಿಗೆ ವೇಳೆ ಹಾಸನದಲ್ಲಿ ನಡೆದ ಟ್ರಕ್ ದುರಂತ ಮತ್ತೊಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ  ವೈರಲ್ ಆಗಿದೆ. ಇದರಲ್ಲಿ ಟ್ರಕ್ ಯಾವ ರೀತಿ ಜನರ ಮೇಲೆ ಹರಿಯಿತು ಎಂಬ ಸ್ಪಷ್ಟ ಚಿತ್ರಣವಿದೆ.

ಹಾಸನದ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ. ಗಣೇಶ ಮೆರವಣಿಗೆ ಮೇಲೆ ಟ್ರಕ್ ಹರಿದು 9 ಜನ ಸಾವನ್ನಪ್ಪಿದ್ದು ಹಲವರಿಗೆ ಗಾಯಗಳಾಗಿವೆ. ಡಿಜೆ ಹಾಡಿಗೆ ಕುಣಿಯುತ್ತಿದ್ದ ಜನಕ್ಕೆ ಏನಾಯಿತು ಎಂದು ಅರಿವಾಗುವಷ್ಟರಲ್ಲಿ ಟ್ರಕ್ ಹರಿದು ಹೋಗಿಯಾಗಿತ್ತು.

ರಸ್ತೆಯ ಒಂದು ಬದಿಯಲ್ಲಿ ಗಣೇಶ ಮೆರವಣಿಗೆ ಸಾಗುತ್ತಿದ್ದರೆ ಇನ್ನೊಂದು ಬದಿಯಿಂದ ಟ್ರಕ್ ಮೊದಲು ಎದುರಿನಿಂದ ಬರುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆಯುತ್ತದೆ. ಈ ರಭಸಕ್ಕೆ ಬೈಕ್ ಸವಾರ ನೆಲಕ್ಕುರುಳುತ್ತಾನೆ. ಅಲ್ಲಿಂದಲೂ ಮುನ್ನುಗ್ಗಿ ಮುಂದೆ ಇದ್ದ ಬ್ಯಾರಿಕ್ಯಾಡ್ ಮುರಿದು ಟ್ರಕ್ ರಸ್ತೆಯ ಇನ್ನೊಂದು ಬದಿಗೆ ನುಗ್ಗುತ್ತದೆ.

ಇಲ್ಲಿ ಗಣೇಶನ ಮೆರವಣಿಗೆಯ ಜೊತೆ ಸಾಗುತ್ತಿದ್ದ ಜನ ಸಾಕಷ್ಟು ಸಂಖ್ಯೆಯಲ್ಲಿದ್ದರು. ಅವರ ಮೇಲೆ ಟ್ರಕ್ ಹರಿದು ಹೋಗುತ್ತದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಬಾಡಿಗೆ ಕೊಡ್ತಿಲ್ಲ ಎಂದ ಸಮೀರ್ ಎಂಡಿ: ನಿಮ್ ಜೊತೆ ನಾವಿದ್ದೇವೆ ಬ್ರದರ್ ಎಂದ ವೀಕ್ಷಕರು