ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಇಂದು ಹಸಿ ಕರಗ ಮಹೋತ್ಸವ ನಡೆಯುತ್ತಿದ್ದು,ನಿನ್ನೆ ಧರ್ಮರಾಯ ದೇವಸ್ಥಾನ ಆಡಳಿತ ಮಂಡಳಿ ದೀಪೋತ್ಸವ ನಡೆಸಿದೆ.ಇಂದು ಅದ್ದೂರಿಯಾಗಿ ಹಸಿ ಕರಗ ನಡೆಯುತ್ತಿದ್ದು,ವಿಶ್ವ ವಿಖ್ಯಾತಿ ಬೆಂಗಳೂರು ಕರಗಕ್ಕೆ 800 ವರ್ಷದ ಇತಿಹಾಸ ಇದೆ.ಹಿಂದಿನ ವರ್ಷ ಕರೋನ ಕಾರಣ ದೇವಸ್ಥಾನಕ್ಕೆ ಬೆಂಗಳೂರು ಕರಗ ಸೀಮಿತವಾಗಿತ್ತು.
ಇಂದು ಭರ್ಜರಿಯಾಗಿ ಕರಗ ಮಹೋತ್ಸವ ನಡೆಯುತ್ತಿದ್ದು,ಏಪ್ರಿಲ್ 6 ಚೈತ್ರ ಪೌರ್ಣಿಮೆಯಂದು ಕರಗ ನಡೆಯಲಿದ್ದು,ಏಪ್ರಿಲ್ 8ರವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಕರಗ ಮಹೋತ್ಸವ ನಡೆಯಲಿದೆ.ಏಪ್ರಿಲ್ 6 ರಂದು ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಕರಗ ನಡೆಯಲಿದ್ದು,ಏಪ್ರಿಲ್ 06 ಮಧ್ಯರಾತ್ರಿ 12.30ಕ್ಕೆ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೂವಿನ ಕರಗ ಹೊರಡಲಿದೆ.