Select Your Language

Notifications

webdunia
webdunia
webdunia
webdunia

ಹರ್ಷ ಕೊಲೆ ಕೈವಾಡ

ಹರ್ಷ ಕೊಲೆ ಕೈವಾಡ
ಬೆಂಗಳೂರು , ಮಂಗಳವಾರ, 22 ಫೆಬ್ರವರಿ 2022 (16:05 IST)
ಹಿಂದೂ ಹರ್ಷನ ಕೊಲೆ ಸಿಗೇಹಟ್ಟಿ ಸಮೀಪದ ಭಾರತಿ ಕಾಲೋನಿ ಕ್ರಾಸ್​ ನಲ್ಲಿ ಸಂಭವಿಸಿತ್ತು. ಅದರ ಬಳಿಕ ನಿನ್ನೆ ನಡೆದ ಅಂತ್ಯಸಂಸ್ಕಾರದ ಮೆರವಣಿಗೆ ವೇಳೆ ಕಲ್ಲೂತೂರಾಟ, ಲಾಠಿ ಪ್ರಹಾರ, ಟಿಯರ್​ ಗ್ಯಾಸ್​ ಪ್ರಯೋಗಗಳು ನಡೆದಿದ್ದವು.ಇದಾದ ಬಳಿಕ ನಿನ್ನೆ ರಾತ್ರಿಯೇ ಶಿವಮೊಗ್ಗ ಜಿಲ್ಲಾಡಳಿತ 144 ಸೆಕ್ಷನ್​ನ್ನ ವಿಸ್ತರಿಸಿ, ಕರ್ಪ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿತ್ತು.
ನಿನ್ನೆ ನಡೆದ ಘಟನೆಗಳಾದರೇ, ಇವತ್ತು ಶಿವಮೊಗ್ಗದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತತ್ತಿತ್ತು. ಮುಖ್ಯವಾಗಿ ಎಲ್ಲೆಡೆ ಹೆಚ್ಚುವರಿ ಪೊಲೀ ಸರನ್ನ ನಿಯೋಜಿಸಲಾಗಿತ್ತು. ವಿವಿಧ ಜಿಲ್ಲೆಗಳಲ್ಲಿ ಶಿವಮೊಗ್ಗಕ್ಕೆ ಪೊಲೀಸರನ್ನ ಕರೆಸಿಕೊಳ್ಳಲಾಗಿದ್ದು, ಪ್ರತಿ ಏರಿಯಾದಲ್ಲಿಯು ಬ್ಯಾರಿಕೇಡ್​ಗಳನ್ನ ಅಳವಡಿಸಿ ಸಂಪೂರ್ಣ ಸಂಚಾರ ಬಂದ್ ಮಾಡಲಾಗಿತ್ತು.
 
ತುಂಗಾನಗರದಲ್ಲಿ 2 ಆಟೋ ದ್ವಿಚಕ್ರ ವಾಹನಕ್ಕೆ ಬೆಂಕಿ
 
ಇನ್ನೂ ಇವತ್ತು ಬೆಳಗ್ಗಿನ ಜಾವವೇ ತುಂಗಾನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಟಿಪ್ಪುನಗರ ಹಾಗೂ ಕೊರಮರಕೇರಿಯಲ್ಲಿ ಒಟ್ಟು ಮೂರು ಆಟೋ ಹಾಗೂ 2 ದಿಚಕ್ರವಾಹನಗಳಿಗೆ ಬೆಂಕಿ ಹಾಕಿದ್ದ ಘಟನೆ ವರದಿಯಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್​ ಠಾಣೆಯಲ್ಲಿ ಕೇಸ್​ ಕೂಡ ದಾಖಲಾಗಿದೆ.
 
ಭದ್ರತೆಗಾಗಿ ಹೊರ ಜಿಲ್ಲೆಗಳ ಪೊಲೀಸರ ನಿಯೋಜನೆ
 
ಇನ್ನೂ ನಿನ್ನೆಯ ಘಟಾನವಳಿಗಳ ಹಿನ್ನೆಲೆಯಲ್ಲಿ ಇವತ್ತು ಹೆಚ್ಚುವರಿ ಪೊಲೀಸರನ್ನ ನಿಯೋಜಿಸಲಾಗಿತ್ತು. ಶಿವಮೊಗ್ಗ ನಗರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಮೂವರು SP , Addl SP-01, DySP-12, PI-39, PSI-54, ASI-48, HC/PC-819 ಸೇರಿದಂತೆ 20-KSRP ತುಕಡಿಗಳು, 10-DAR ತುಕಡಿಗಳು ಮತ್ತು 01-RAF ತುಕಡಿಯನ್ನು ನಿಯೋಜನೆ ಮಾಡಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಮೇಲೆ ಟೀಕೆಗಳ ಸುರಿಮಳೆ?