Publish Date: Tue, 30 Jan 2024 (20:33 IST)
Updated Date: Tue, 30 Jan 2024 (19:53 IST)
ಬೆಂಗಳೂರು : ಸೋಮವಾರ, ಹ್ಯಾರಿಸ್ ಬಿಡಿಎ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.ಅಧಿಕಾರ ಸ್ವೀಕರಿಸುವ ವೇಳೆ ಶಾಸಕ ಎನ್.ಎ. ಹ್ಯಾರಿಸ್ ಪಾದರಕ್ಷೆ ಧರಿಸಿರುವುದು ಟೀಕೆಗೊಳಗಾಗಿದೆ. ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಬಿಡಿಎ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನ ಗಣೇಶ ಪೂಜೆಯ ವೇಳೆ ಶೂ ಧರಿಸಿರುವ ಶಾಸಕ ಹ್ಯಾರಿಸ್. ಪೂಜೆಯ ಸಮಯದಲ್ಲಿ ಪಾದರಕ್ಷೆ ಧರಿಸಬಾರದು ಎಂಬ ಕನಿಷ್ಠ ಜ್ಞಾನವೂ ಇಲ್ಲವೇನ್ರಿ ನಿಮಗೆ ಎಂದು ಮೋಹನ್ ದಾಸರಿ ಪ್ರಶ್ನಿಸಿದ್ದಾರೆ. ಜೊತೆಗೆ, ನಿಮ್ಮ ಅಲ್ಲಾಗೆ ಪ್ರಾರ್ಥನೆ ಮಾಡುವಾಗ ಎಷ್ಟು ಅಚ್ಚುಕಟ್ಟಾಗಿ ಚಪ್ಪಲಿ ಶೂಗಳನ್ನು ಹೊರಗಿಟ್ಟು ಪೂಜಿಸುತ್ತೀರಾ, ನಮ್ಮ ಪೂಜೆಗೆ ಯಾಕಿಷ್ಟು ಗರ್ವ ಎಂದು ಕಿಡಿ ಕಾರಿದ್ದಾರೆ.