Publish Date: Fri, 02 Apr 2021 (12:01 IST)
Updated Date: Fri, 02 Apr 2021 (12:03 IST)
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೂ ಸಂಕಷ್ಟ ಶುರುವಾಗಿದ್ದು, . ಸಿಡಿ ಕೇಸ್ ನಲ್ಲಿ ಡಿಕೆಶಿ ವಿರುದ್ಧ ದೂರು ದಾಖಲಾಗಿದೆ.
ಡಿಕೆಶಿ ವಿರುದ್ಧ ಶ್ರೀಧರ್ ಮೂರ್ತಿ ಎಂಬುವವರು ಇಡಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ಡಿಕೆ ಶಿವಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್, ನರೇಶ್ ಗೌಡ ಸೇರಿ ಐವರ ವಿರುದ್ಧ ದೂರು ನೀಡಿದ್ದಾರೆ.
500 ಕೋಟಿ ರೂ. ಅಕ್ರಮ ವ್ಯವಹಾರ ಆರೋಪ ಹೊರಿಸಿದ್ದಾರೆ. ಹನಿಟ್ರ್ಯಾಪ್, ಒಳ ಸಂಚಿಗೆ ಹಣ ಬಳಿಸಿದ ಹಿನ್ನಲೆಯಲ್ಲಿ ಶ್ರೀಧರ್ ಮೂರ್ತಿ ದೂರು ದಾಖಲಿಸಿ, ಅಕ್ರಮ ವ್ಯವಹಾರದ ತನಿಖೆಗೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.