ಬೆಂಗಳೂರು : ಬಾಕಿ ಉಳಿಸಿಕೊಂಡಿರುವ ಗ್ರಾಹಕರ ಮನೆಗೇ ತೆರೆಳಿ ಸ್ವತಃ ಟ್ರಾಫಿಕ್ ಪೊಲೀಸರ ಮೂಲಕ ದಂಡದ ಹಣವನ್ನು ವಸೂಲಿ ಮಾಡಲು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಮುಂದಾಗಿದ್ದು,ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಸದೇ ಬಾಕಿ ಇರಿಸಿಕೊಂಡಿರುವ ವಾಹನಸವಾರರಿಗೆ ಶಾಕ್ ಎದುರಾಗಿದೆ. ಇನ್ನೂ ನಗರದಲ್ಲಿ 2300 ಕ್ಕೂ ಹೆಚ್ಚು ವಾಹನಗಳು 50 ಸಾವಿರ ರೂ. ಗಿಂತ ಹೆಚ್ಚು ಬಾಕಿ ಉಳಿಸಿಕೊಂಡಿದ್ದು, 50 ಸಾವಿರ ರೂ. ಗಳಿಗಿಂತ ಹೆಚ್ಚು ಮೊತ್ತ ಬಾಕಿ ಇರಿಸಿಕೊಂಡಿರುವ ವಾಹನ ಸವಾರರ ಮನೆಗೆ ಮಾತ್ರ ಪೊಲೀಸರು ಭೇಟಿ ನೀಡಲಿದ್ದಾರೆ.
ಮನೆಗೆ ತೆರಳಿದಾಗಲೂ ಬಾಕಿ ಹಣ ಕೊಟದಿದ್ದರೆ ವಾಹನದ ಮಾಲಿಕರ ವಿರುದ್ದ ಚಾರ್ಜ್ ಶೀಟ್ ದಾಖಲಿಸಲು ಸಂಚಾರ ಪೊಲೀಸ್ ಇಲಾಖೆ ನಿರ್ಧರಿಸಿದ್ದು , ಬಳಿಕ ನ್ಯಾಯಲಯದ ಮೂಲಕ ಸಮನ್ಸ್ ಕಳಿಸಲಿದೆ.