Select Your Language

Notifications

webdunia
webdunia
webdunia
webdunia

ಮಹಿಷ ಮರ್ದಿನಿ ದೇಗುಲದ ಗೇಟ್ ವಿವಾದ ಸುಖಾಂತ್ಯ

ಮಹಿಷ ಮರ್ದಿನಿ ದೇಗುಲದ ಗೇಟ್ ವಿವಾದ ಸುಖಾಂತ್ಯ
ಉಡುಪಿ , ಭಾನುವಾರ, 22 ಜುಲೈ 2018 (20:58 IST)
ಬಹುದಿನಗಳಿಂದ ಸಮಸ್ಯೆಯಾಗಿ ಭಾದಿಸುತ್ತಿದ್ದ ವಿವಾದಿತ ಪ್ರಕರಣವೊಂದಕ್ಕೆ ಶಾಶ್ವತ ತೆರೆ ಬಿದ್ದಿದೆ. ಉಡುಪಿಯ ಕಡಿಯಾಳಿ ಮಹಿಷ ಮರ್ದಿನಿ ದೇಗುಲದ ಅವರಣಕ್ಕೆ ಆಳವಡಿಸಿದ ಗೇಟಿನ ವಿಚಾರದ ಗಲಾಟೆ ಕೊನೆಗೂ ಸುಖಾಂತ್ಯ ಕಂಡಿದೆ.

ಕಳೆದ ಹಲವು ದಿನಗಳಿಂದ ದೇವಸ್ತಾನದ ಅಡಳಿತ ಮಂಡಳಿ ವೈಯುಕ್ತಿಕ ಕಾರಣಕ್ಕೆ ದೇವಸ್ತಾನದ ಆವರಣಕ್ಕೆ ಗೇಟು ಹಾಕಿತ್ತು ಭಾಗದಲ್ಲಿರುವ ನಿವಾಸಿಗಳಿಗೆ ದೇಗುಲದ ಅವರಣದಲಿಯೇ ಸಾಗಬೇಕಾದ ಅನಿವಾರ್ಯತೆ ಇದ್ದ ಕಾರಣ ಇದೆ ರಸ್ತೆಯನ್ನು ಅವಲಂಬಿತರಾಗಿದ್ದರು. ಹಲವಾರು ದಿನಗಳಿಂದ ಗೇಟಿನ ವಿಚಾರದಲ್ಲಿ ಸ್ಥಳೀಯರೊಂದಿಗೆ ಹಾಗೂ ದೇವಸ್ಥಾನದ ಆಡಳಿತ ಸಮಿತಿಯೊಂದಿಗೆ ವಾಕ್ಸಮರ ನಡೆಯುತ್ತಿತ್ತು. ಇವತ್ತು ಮತ್ತೇ ಇದೆ ವಿಚಾರದಲ್ಲಿ ಜಗಳ ಆರಂಭವಾಗಿದೆ. ಗೇಟನ್ನು ತೆರವುಗೊಳಿಸುವಂತೆ ಸ್ಥಳೀಯರು ಆಡಳತ ಮಂಡಳಿಗೆ ಒತ್ತಾಯಿಸಿದ್ರು.

ಆದ್ರೆ ಆಡಳಿತ ಮಂಡಳಿ ಸ್ಥಳೀಯರ ಒತ್ತಾಯವನ್ನು ನಿರಾಕರಿಸಿತು. ಹೀಗಾಗಿ ರೊಚ್ಚಿಗೆದ್ದ ಸ್ಥಳೀಯರು ದೆವಸ್ಥಾನದ ಆಡಳಿತ ಮೊಕ್ತೆಸಾರನ್ನು ತರಾಟೆಗೆ ತೆಗೆದುಕೊಂಡ್ರು. ಜಗಳ ತಾರಕ್ಕೇರುತ್ತಿದಂತೆ ಸ್ಥಳಕ್ಕೆ ಶಾಸಕ ರಘುಪತಿ ಭೇಟಿ ನೀಡಿದ್ರು. ದೇವಸ್ಥಾನದ  ಆವರಣದ ಗೋಡೆಗೆ ಗೇಟು ಹಾಕಲು ಯಾರಿಗೂ ಹಕ್ಕಿಲ್ಲ. ದೇವಸ್ಥಾನ ಸಾರ್ವಜನಿಕರ ಹಾಗೂ ಸರಕಾರದ ಸೊತ್ತು. ವೈಯುಕ್ತಿಕ ಕಾರಣಕ್ಕಾಗಿ ಗೇಟು ಬಂದ್ ಮಾಡಿ ಜನ ಸಾಮಾನ್ಯರಿಗೆ  ತೊಂದರೆ ಮಾಡುವುದು ಎಷ್ಟು ಸರಿ ಎಂದು ಆಡಳಿತ ಮೊಕ್ತೆಸಾರನನ್ನು ಪ್ರೆಶ್ನೆ ಮಾಡಿದ್ರು. ದೇವಸ್ತಾನಕ್ಕೆ ಆಳವಡಿಸರುವ ಗೇಟನ್ನು ತೆರವುಗೊಳಿಸಬೇಕು ಎಂದು ಆಗ್ರಹ ಮಾಡಿದ್ರು. ಇದಕ್ಕೆ ಆಡಳಿತ ಮೊಕ್ತೆಸಾರರು ಒಪ್ಪದಿದ್ದಾಗ ಸ್ಥಳಕ್ಕೆ ಪೋಲಿಸರನ್ನು ಕರೆಯಿಸಿ ಗೇಟನ್ನು ತೆರವುಗೊಳಿಸುವಂತೆ ಕ್ರಮಕೈಗೊಳ್ಳಲಾಯಿತು.


Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್.ಕೆ.ಪಾಟೀಲ್ ಪತ್ರ ವಯಕ್ತಿಕ ಎಂದ ಸಚಿವ ಪಾಟೀಲ್