Publish Date: Thu, 06 Apr 2023 (16:18 IST)
Updated Date: Thu, 06 Apr 2023 (15:41 IST)
ವಿಧಾನಸಭಾ ಚುನಾವಣೆಗೆ ಎರಡನೇ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್, ಮೊದಲ ಪಟ್ಟಿಯ ರೀತಿಯಲ್ಲಿಯೇ ಎರಡನೇ ಪಟ್ಟಿಯಲ್ಲೂ ಜಾತಿ ರಾಜಕೀಯಕ್ಕೆ ಮಣೆ ಹಾಕಿದೆ. ಸಮುದಾಯವರ ಪ್ರಾತಿನಿಧ್ಯಕ್ಕೆ ಮಣೆಹಾಕಿರುವ ಕಾಂಗ್ರೆಸ್, ಅಭ್ಯರ್ಥಿಗಳ ಆಯ್ಕೆಗೆ ಜಾತಿ ಪ್ರಾಬಲ್ಯದ ಲೆಕ್ಕಾಚಾರ ಹಾಕಿ ಟಿಕೆಟ್ ನೀಡಿದೆ. ಲಿಂಗಾಯತರಿಗೆ 10 ಟಿಕೆಟ್, ಒಕ್ಕಲಿಗ ಸಮುದಾಯಕ್ಕೆ ಎರಡನೇ ಪಟ್ಟಿಯಲ್ಲಿ 10 ಟಿಕೆಟ್, ಕುರುಬ 3, ರೆಡ್ಡಿ 1, SC ಎಡಗೈ 2, SC ಬಲಗೈ 2, ಮುಸ್ಲಿಂ 3, ಈಡಿಗ 1, ST 2, ಮರಾಠಿ 1, ನಾಯ್ಡು ಸಮುದಾಯಕ್ಕೆ 1 ಟಿಕೆಟ್ ಘೋಷಣೆ ಮಾಡಿದ್ದು, ಮೊಗವೀರ 2, ರಜಪೂತ ಸಮುದಾಯಕ್ಕೆ 1 ಟಿಕೆಟ್ ನೀಡಿದೆ.