Publish Date: Mon, 20 Jul 2020 (21:33 IST)
Updated Date: Mon, 20 Jul 2020 (21:34 IST)
ಮಾರಕ ಕೊರೊನಾ ವೈರಸ್ ಮತ್ತೆ ಇಬ್ಬರು ಬಲಿಯಾಗಿದ್ದು, ಅರ್ಧ ಶತಕದತ್ತ ಸಾವನ್ನಪ್ಪಿದವರ ಸಂಖ್ಯೆ ತಲುಪುತ್ತಿದೆ.
ಕೊರೋನಾ ಸೋಂಕಿನಿಂದ ಮತ್ತೆ ಕಲಬುರಗಿ ಮತ್ತು ಬೀದರ ಜಿಲ್ಲೆಯ ತಲಾ ಓರ್ವರು ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 48 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯೊಂದಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬೀದರ ಜಿಲ್ಲೆಯ 57 ವರ್ಷದ ಮಹಿಳೆ (P-21336) ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯ ಕಲಬುರಗಿ ನಗರದ ಬ್ಯಾಂಕ್ ಕಾಲೋನಿ (ಏಶನ್ ಮಾಲ್ ಹಿಂದುಗಡೆ) ಪ್ರದೇಶದ 40 ವರ್ಷದ ಪುರುಷ (P-36931) ನಿಧನ ಹೊಂದಿದ್ದಾರೆ.