Select Your Language

Notifications

webdunia
webdunia
webdunia
webdunia

ಕ್ಷುಲಕ ಕಾರಣಕ್ಕೆ ಫೈರಿಂಗ್

bangalore gun firing
ಬೆಂಗಳೂರು , ಶನಿವಾರ, 16 ಅಕ್ಟೋಬರ್ 2021 (15:11 IST)
ಆಡಿ (Audi) ಕಾರ್ ಮತ್ತು ಬೈಕ್ ಸವಾರನ ನಡುವೆ ನಡೆದ ಮಾತಿನ ಚಕಮಕಿ ತಾರಕಕ್ಕೇರಿ ಗುಂಡು ಹಾರಿಸಿರುವ ಪ್ರಸಂಗ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ. ಬೈಕ್ ಸವಾರ ಯಶವಂತಪುರ ಮಾರ್ಗವಾಗಿ ಚಲಿಸುತ್ತಿದ್ದ. ಈ ವೇಳೆ ಎದುರಿನಿಂದ ಬಂದ ಅಡಿ ಕಾರ್‌ನಲ್ಲಿದ್ದ ವ್ಯಕ್ತಿ ಬೈಕ್ ಸವಾರ ಅನಿಲ್‌ನನ್ನು ಕೈನಿಂದ ದೂರ ತಳ್ಳಿದ್ದ. ಇದರಿಂದ ಕುಪಿತಗೊಂಡಿದ್ದ ಅನಿಲ್ ಬೈಕ್ ನಿಲ್ಲಿಸಿ ಅಡಿ ಕಾರ್‌ಗೆ ಅಡ್ಡ ಹಾಕಿ ಪ್ರಶ್ನಿಸಿದ್ದ. ಕಾರ್‌ನಿಂದ ಹೊರಗೆ ಬಾ ಎಂದು ಅಡಿ ಕಾರ್‌ನಲ್ಲಿದ್ದ ವ್ಯಕ್ತಿಯನ್ನು ಹೊರಗೆ ಎಳೆಯಲು ಬೈಕ್ ಸವಾರ ಯತ್ನಿಸಿದ್ದ. ಈ ವೇಳೆ ಕಾರಿನಲ್ಲಿದ್ದ ಚಾಲಕ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಇದರಿಂದ ಜನರು ಗಾಬರಿಯಾಗಿ ಸ್ಥಳಕ್ಕೆ ಆಗಮಿಸುವ ವೇಳೆಗೆ ಆಡಿ ಕಾರ್ ಎಸ್ಕೇಪ್ ಆಗಿದೆ. ಈ ಕುರಿತು ಯಶವಂತಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕನ ಮೇಲೆ ಅತ್ಯಾಚಾರ; ಆರೋಪಿ ಬಂಧನ