Publish Date: Sat, 16 Oct 2021 (14:39 IST)
Updated Date: Sat, 16 Oct 2021 (14:44 IST)
ತಾಲೂಕಿನ ಶ್ರೀನಿವಾಸಪುರ ಗ್ರಾಪಂ ಭೈರಸಂದ್ರದ ತೊರೆಪಾಳ್ಯ ಗ್ರಾಮ, ನಗರದಿಂದ 7ಕಿಮೀ ದೂರವಿದ್ದು ಉತ್ತಮ ರಸ್ತೆ ಇಲ್ಲದೆ ಕೆಸರುಗದ್ದೆ ಹಾಗೂ ಗುಂಡಿಬಿದ್ದು ಸಮಸ್ಯೆ ಎದುರಾಗಿತ್ತು.
ಪತ್ರಿಕಾ ಮಾಧ್ಯಮದಲ್ಲಿ ಸುದ್ದಿಯಾದ ತಕ್ಷಣ ಸ್ಥಳಕ್ಕೆ ಬಂದ ತಾಪಂ ಅಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷರು ರಸ್ತೆ ಪರಿಶೀಲನೆ ಮಾಡಿ ಹೋಗುವಾಗ ಅವರ ಕಾರು ಕೆಸರಿನಲ್ಲಿ ಸಿಲುಕಿತು. ಗ್ರಾಮಸ್ಥರು ಟ್ರ್ಯಾಕ್ಟರ್‌ಮೂಲಕ ಕಾರನ್ನು ಎಳೆದು ಹೊರಗೆ ತೆಗೆದ ಘಟನೆ ನಡೆದಿದ್ದು ಗ್ರಾಮದ ರಸ್ತೆ ಸಮಸ್ಯೆಅಧಿಕಾರಿಗಳಿಗೆ ಸ್ಥಳದಲ್ಲಿ ಅರಿವಾಗಿದೆ.