Select Your Language

Notifications

webdunia
webdunia
webdunia
Saturday, 12 April 2025
webdunia

ಹೊಸವರ್ಷ ಆಚರಣೆಗೆ ಪೊಲೀಸ್ ಇಲಾಖೆಯಿಂದ ಗೈಡ್ ಲೈನ್ಸ್

Guide lines from police department for New Year celebrations
bangalore , ಶನಿವಾರ, 17 ಡಿಸೆಂಬರ್ 2022 (20:24 IST)
ಎರಡು ವರ್ಷ ಕೊರೊನಾ ದಿಂದ ಹೊಸ ವರ್ಷ ಆಚರಣೆಗೆ ಬ್ರೇಕ್‌ ಬಿದ್ದಿತ್ತು. ಈ ಬಾರಿ ಅದ್ಧೂರಿ ಆಚರಣೆಗೆ ಬೆಂಗಳೂರು ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಕ್ರಿಸ್‌ ಮೆಸ್‌ ಮತ್ತು ಹೊಸ ವರ್ಷ ಆಚರಣೆಗೆ ಅನುಮತಿ ಕಡ್ಡಾಯಗೊಳಿಸಿದ್ದಾರೆ
ಬೆಂಗಳೂರು ನಗರ ಪಂಚತಾರ ಹೋಟೆಲ್‌ , ಕ್ಲಬ್ ಗಳು, ಮನರಂಜನಾ ಕಾರ್ಯಕ್ರಮ ಆಯೋಜಕರಿಗೆ ಪೊಲೀಸರಿಂದ ಸೂಚನೆ ನೀಡಿದ್ದಾರೆ. ಆಚರಣೆ ವೇಳೆ ಮಾದಕವಸ್ತು ಸರಬರಾಜು ಆಗದಂತೆ ನೋಡಿಕೊಳ್ಳಿ. ಜೊತೆಗೆ ಸಾರ್ವಜನಿಕ ಸುರಕ್ಷತೆ, ರಕ್ಞಣೆಗೆ ಆಯೋಜಕರು ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
 
ಇನ್ನು ಮಹಿಳೆಯರು, ಮಕ್ಕಳು ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು . ಆಗಮನ ಮತ್ತು ನಿರ್ಗಮನ , ಪಾರ್ಕಿಂಗ್‌ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆಯೋಜಕರಿಗೆ ಸೂಚನೆ ನೀಡಿದ್ದಾರೆ.ಸ್ಥಳದಲ್ಲಿ ಸಿಸಿಟಿವಿ ಅಳವಡಿಸಬೇಕು, ಬೆಳಕಿನ ವ್ಯವಸ್ಥೆ ಸಮರ್ಪಕವಾಗಿರಬೇಕು ಎಂದು ಪೊಲೀಸ್‌ ಕಮೀಷನರ್ ಎಚ್ಚರಿಕೆ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಬಾವಿಗೆ ಬಿದ್ದು ವ್ಯಕ್ತಿ ಸಾವು