Publish Date: Wed, 03 Jun 2026 (15:08 IST)
Updated Date: Wed, 03 Jun 2026 (15:10 IST)
ಬೆಂಗಳೂರು: ಡಿಕೆ ಶಿವಕುಮಾರ್ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಶುರುವಾಗಿದ್ದು, ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರಲಿರುವ ಗಣ್ಯರ ಬಂದಿಳಿದ ಗಣ್ಯರ ಲಿಸ್ಟ್ ಇಲ್ಲಿದೆ.
ಡಿಕೆ ಶಿವಕುಮಾರ್ ಇಂದು ರಾಜ್ಯದ 25 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನೆ ಸ್ವೀಕರಿಸಲಿದ್ದಾರೆ. ಈ ಪ್ರಮಾಣ ವಚನಕ್ಕೆ ಇಂದು ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ ಮತ್ತು ದೇವೇಗೌಡರನ್ನು ಆಹ್ವಾನಿಸಿದ್ದಾರೆ.
ಇಂದಿನ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಖುದ್ದಾಗಿ ದೆಹಲಿಯಿಂದ ಬಂದಿದ್ದಾರೆ. ಅವರನ್ನು ಖುದ್ದಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಎಚ್ಎಎಲ್ ಏರ್ ಪೋರ್ಟ್ ಗೆ ತೆರಳಿ ಸ್ವಾಗತ ನೀಡಿದ್ದಾರೆ. ಇವರಲ್ಲದೆ ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸುರ್ಜೇವಾಲ ಭಾಗಿಯಾಗುವ ನಿರೀಕ್ಷೆಯಿದೆ. ಇವರಲ್ಲದೆ ಕೇರಳಂ ಸಿಎಂ ವಿಡಿ ಸತೀಶನ್ ಬರಲಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ಇತರೆ ಸಿಎಂಗಳೂ ಬರುತ್ತಾರಾ ಎನ್ನುವುದು ಇನ್ನೂ ಸ್ಪಷ್ಟನೆವಾಗಿಲ್ಲ.
ಡಿಕೆ ಶಿವಕುಮಾರ್ ಪ್ರಮಾಣ ವಚನದಲ್ಲಿ ವಿವಿಧ ಮಠಾಧೀಶರೂ ಭಾಗಿಯಾಗಲಿದ್ದಾರೆ. ಜೊತೆಗೆ ಸರ್ವಧರ್ಮದ ಧಾರ್ಮಿಕ ನಾಯಕರೂ ಭಾಗಿಯಾಗಲಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ