Daily Horoscope

Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಜೊತೆ ಪ್ರಮಾಣ ವಚನ ಸ್ವೀಕರಿಸಲಿರುವ 13 ಸಚಿವರು ಇವರೇ: ಖರ್ಗೆ ಪುತ್ರನಿಗೆ ದೊಡ್ಡ ಸ್ಥಾನ ಸಾಧ್ಯತೆ

Siddaramaiah-DK Shivakumar-KC Venugopal
ಬೆಂಗಳೂರು: ಡಿಕೆ ಶಿವಕುಮಾರ್ ಜೊತೆ ಇಂದು 13 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ. ಈ ಪೈಕಿ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆಗೆ ಈ ಬಾರಿ ದೊಡ್ಡ ಜವಾಬ್ಧಾರಿಯೇ ಸಿಗುವುದು ಖಚಿತವಾಗಿದೆ.

ಡಿಕೆ ಶಿವಕುಮಾರ್ ಇಂದು ಮಾಧ್ಯಮಗಳ ಜೊತೆ ಮಾತನಾಡುವಾಗ ತಮ್ಮ ಜೊತೆಗೆ 13 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಹೈಕಮಾಂಡ್ ಜೊತೆ ಚರ್ಚೆ ನಡೆಸಿ ಮೊದಲ ಸಂಪುಟದಲ್ಲಿ ಅವಕಾಶ ಪಡೆದ ಶಾಸಕರು ಯಾರು ಎನ್ನುವುದು ಬಯಲಾಗಿದೆ.

ಪರಮೇಶ್ವರ್, ಮುನಿಯಪ್ಪ, ಕೆಜೆ ಜಾರ್ಜ್, ಎಂಬಿ ಪಾಟೀಲ್, ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣಭೈರೇಗೌಡ, ಯತೀಂದ್ರ ಸಿದ್ದರಾಮಯ್ಯ, ಈಶ್ವರ್ ಖಂಡ್ರೆ, ಭೈರತಿ ಸುರೇಶ್, ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ ಮತ್ತು ಯುಟಿ ಖಾದರ್ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ವಿಶೇಷವಾಗಿ ಈ ಬಾರಿ ಪ್ರಿಯಾಂಕ್ ಖರ್ಗೆಗೆ ಗೃಹಖಾತೆ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾದಲ್ಲಿ ಈಗ ಗೃಹ ಸಚಿವರಾಗಿದ್ದ ಪರಮೇಶ್ವರ್ ಗೆ ಉಪಮುಖ್ಯಮಂತ್ರಿ ಹುದ್ದೆ ಸಿಗಲಿದೆ. ಸದ್ಯದ ಸಚಿವರ ಪಟ್ಟಿಯನ್ನು ನೋಡುವಾಗ ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೆ ಮೂರು, ಕುರುಬ ಸಮುದಾಯಕ್ಕೆ ಎರಡು, ಇಬ್ಬರಿಗೆ ದಲಿತ ಕೋಟಾ, ಒಬ್ಬ ಕ್ರಿಶ್ಚಿಯನ್ ಮತ್ತು ಒಬ್ಬ ಮುಸ್ಲಿಂ ಸಮುದಾಯದ ಶಾಸಕರಿಗೆ ಅವಕಾಶ ನೀಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಮಾಣ ವಚನಕ್ಕೆ ಕೆಲವೇ ಕ್ಷಣಗಳ ಮೊದಲು ಯಡಿಯೂರಪ್ಪ ನಿವಾಸಕ್ಕೆ ಡಿಕೆ ಶಿವಕುಮಾರ್: ಅಚ್ಚರಿಯ ಬೆಳವಣಿಗೆ