ನಾನು ದಲಿತ ವಿರೋಧಿಯಲ್ಲ, ತಪ್ಪಾಗಿದ್ದರೆ ಕ್ಷಮಿಸಿ ಎಂದ ಜಿಟಿ ದೇವೇಗೌಡ

Sampriya
ಮಂಗಳವಾರ, 26 ಆಗಸ್ಟ್ 2025 (19:28 IST)
ಮೈಸೂರು: ನಾನು ದಲಿತರ ಪರವಾಗಿ ಅನೇಕ ಕೆಲಸ ಮಾಡಿದ್ದೇನೆ. ನಾನು ದಲಿತ ವಿರೋಧಿಯಲ್ಲ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ, ಟೀಕಿಸುವವರು ನನ್ನ ಪಾಲಿನ ದೇವರು ಎಂದು ಶಾಸಕ ಜಿಟಿ ದೇವೇಗೌಡ ತಿಳಿಸಿದರು. 

ವಿಧಾನಸಭಾ ಕಲಾಪದಲ್ಲಿ ಜಿಟಿಡಿ ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆಂಬ ಕುರಿತು ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಸರ್ಕಾರದ ಪಾಲುಗಾರಿಕೆ ಇರುವ ಸಂಘಗಳಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಸೇರಿಸಿ ಹಾಗೂ ಒಬ್ಬ ಹಿಂದುಳಿದ ವರ್ಗದವರಿಗೂ ಸ್ಥಾನಮಾನ ನೀಡಿ ಎಂದು ಕಲಾಪದಲ್ಲಿ ವಿನಂತಿಸಿದ್ದೇನೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಹಲವರು ಟೀಕೆಗಾಗಿ ಕೆಟ್ಟ ಪದಗಳನ್ನು ಬಳಸಿದ್ದಾರೆ ಎಂದರು.

ಇದುವರೆಗೆ ನನ್ನ ರಾಜಕೀಯ ಜೀವನದಲ್ಲಿ ದೂರುಗಳು ದಾಖಲಾಗಿಲ್ಲ.ಈ ವಿಚಾರವಾಗಿ ದಾಖಲಾದರೂ, ನನ್ನ ವಿರುದ್ಧ ಕೆಟ್ಟದಾಗಿ ಮಾತನಾಡುವರ ವಿರುದ್ಧ ದೂರು ನೀಡುವುದಿಲ್ಲ. ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳಲಿ ಎಂದರು.

ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, 'ಪ್ರತೀ ವರ್ಷವೂ ದಸರಾವನ್ನು ಸಾಹಿತಿ, ಮಠಾಧೀಶರು, ಹಿರಿಯರಿಂದ ಉದ್ಘಾಟಿಸಲಾಗುತ್ತದೆ. 

ಹಿಂದೆ ನಿಸಾರ್ ಅಹಮದ್ ಕೂಡ ಉದ್ಘಾಟಿಸಿದ್ದರು. ದಸರಾದ ಉನ್ನತ ಮಟ್ಟದ ಸಮಿತಿಯು ಮುಖ್ಯಮಂತ್ರಿಗಳು ಉದ್ಘಾಟಕರನ್ನು ಆಯ್ಕೆ ಮಾಡಲು ಅನುಮತಿ ನೀಡಿತ್ತು, ಅದಕ್ಕೆ ಸರಿಯಾಗಿ ಅವರು ಆಯ್ಕೆ‌ ಮಾಡಿದ್ದಾರೆ. ಚಾಮುಂಡೇಶ್ವರಿ ಮೇಲೆ‌ ನಂಬಿಕೆ‌ ಇಲ್ಲದಿದ್ದರೆ ಉದ್ಘಾಟಕರು ಬರೋದೆ‌ ಇಲ್ವಲ್ಲ ಎಂದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಸರ್ಟಿಫಿಕೇಟ್ ಪಡೆಯುವುದು ಹೇಗೆ, ಯಾವ ದಾಖಲೆಗಳು ಬೇಕು ಇಲ್ಲಿದೆ ಮಾಹಿತಿ

ಡಿಕೆ ಶಿವಕುಮಾರ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ರಹಸ್ಯ ಮೀಟಿಂಗ್: ನಡೆದಿದ್ದೇನು

ರಾಹುಲ್ ಗಾಂಧಿ ವಿದೇಶ ಪ್ರವಾಸ ಇಂದಿನಿಂದ ಶುರು: ಕರ್ನಾಟಕದ ಕೈ ನಾಯಕರಿಗೆ ಟೆನ್ಷನ್

ರಸ್ತೆ ಮಾಡಿದ್ರೆ ಬಡವರು ಉದ್ದಾರ ಆಗ್ತಾರಾ: ಗೃಹಸಚಿವ ಡಾ ಜಿ ಪರಮೇಶ್ವರ್ ಉವಾಚ

ಪತ್ನಿ ಪಕ್ಕದಲ್ಲೇ ಶಾಮನೂರು ಶಿವಶಂಕರಪ್ಪ ಮಣ್ಣಿಗೆ: ಅಂತ್ಯಕ್ರಿಯೆ ಡೀಟೈಲ್ಸ್ ಇಲ್ಲಿದೆ

ಮುಂದಿನ ಸುದ್ದಿ
Show comments