Select Your Language

Notifications

webdunia
webdunia
webdunia
webdunia

10 ತಿಂಗಳ ಗೃಹಲಕ್ಷ್ಮೀ ಹಣ ಕೂಡಿಟ್ಟು ಸೊಸೆಗೆ ಬಿಗ್ ಸರ್ಪ್ರೈಸ್ ಕೊಟ್ಟ ಅತ್ತೆ

10 ತಿಂಗಳ ಗೃಹಲಕ್ಷ್ಮೀ ಹಣ ಕೂಡಿಟ್ಟು ಸೊಸೆಗೆ ಬಿಗ್ ಸರ್ಪ್ರೈಸ್ ಕೊಟ್ಟ ಅತ್ತೆ

Sampriya

ಹಾವೇರಿ , ಮಂಗಳವಾರ, 27 ಆಗಸ್ಟ್ 2024 (15:52 IST)
Photo Courtesy X
ಹಾವೇರಿ: ಗೃಹಲಕ್ಷ್ಮೀ ಹಣಕ್ಕಾಗಿ ಅದೆಷ್ಟೋ ಅತ್ತೆ ಸೊಸೆಯಂದಿರು ಜಗಳವಾಡಿರುವ ಬಗ್ಗೆ ಕೇಳಿದುಂಟು, ಆದರೆ ಇಲ್ಲೊಂದು ಅತ್ತೆ ತನಗೆ ಬಂದ ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ಸೊಸೆಯ ಜೀವನೋಪಾಯಕ್ಕೆ ಹೊಸ ದಾರಿ ಮಾಡಿಕೊಂಡಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕು ನೀರಲಗಿಯಲ್ಲಿ ಅತ್ತೆಯೊಬ್ಬರು ತನಗೆ ಬಂದ ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ಸೊಸೆಗೆ ಫ್ಯಾನ್ಸಿ ಅಂಗಡಿಯನ್ನು ಮಾಡಿಕೊಂಡಿದ್ದಾರೆ.

ಈ ಮೂಲಕ ಆದರ್ಶ ಅತ್ತೆಯಾಗಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಗಾಗಲೇ ಗೃಹಲಕ್ಷ್ಮೀ ಯೋಜನೆಯನ್ನು ಫಲ ಪಡೆದು ಅದೆಷ್ಟೋ ಮಹಿಳೆಯರು ಮಾದರಿಯಾಗಿ ಬದುಕು ರೂಪಿಸಿದ ವಿಚಾರ ಕೇಳಿದ್ದೇವೆ.

ಇದೀಗ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಪ್ರಯೋಜನವನ್ನು ಪಡೆದು ಸೊಸೆಯ ಬದುಕಿಗೆ ಅತ್ತೆ ಹೊಸ ದಾರಿ  ಕಂಡುಕೊಂಡಿದ್ದಾರೆ. ಈ ಮೂಲಕ ಈ ಅತ್ತೆ ಸೊಸೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಈಚೆಗಷ್ಟೇ ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ತನ್ನ ಊರಿನ ಗ್ರಾಮಸ್ಥರಿಗೆ ಮಹಿಳೆಯೊಬ್ಬರು ಹೋಳಿಗೆ ಊಟ ಆಗಿ ಸುದ್ದಿಯಾಗಿದ್ದರು. ಈ ವಿಚಾರ ತಿಳಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವಸ್ಥಾನದಲ್ಲಿ ಮಾಡಿದ ಪ್ರಸಾದ ಸೇವಿಸಿ ಮೂವರು ದುರ್ಮರಣ, ಹಲವು ಮಂದಿ ಅಸ್ವಸ್ಥ