Select Your Language

Notifications

webdunia
webdunia
webdunia
webdunia

ಮದುವೆಯಾಗಿ ಸೈಕಲ್ ಮೇಲೆ ವಧುವಿನ ಜೊತೆ ಬಂದ ವರ

ಮದುವೆಯಾಗಿ ಸೈಕಲ್ ಮೇಲೆ ವಧುವಿನ ಜೊತೆ ಬಂದ ವರ
ಹಮೀರ್ ಪುರ , ಶನಿವಾರ, 2 ಮೇ 2020 (15:34 IST)
ಅವರಿಬ್ಬರ ಮದುವೆಗೆ ಕೊರೊನಾ ಅಡ್ಡಿಯಾಗಿತ್ತು. ಆದರೂ ಛಲಬಿಡದ ಯುವಕ ಸೈಕಲ್ ಮೇಲೇರಿ ಸಾಗಿ ತನ್ನ ಮನದನ್ನೆಯನ್ನು ಮದುವೆಯಾಗಿ ಮನೆಗೆ ಕರೆತಂದಿದ್ದಾನೆ.

ಕಲ್ಕು ಪ್ರಜಾಪತಿ ಹಾಗೂ ರಿಂಕಿ ಮದುವೆ ನಿಶ್ಚಯವಾಗಿತ್ತು. ಮದುವೆ ಕಾರ್ಡ್ ಗಳೂ ಸಿದ್ಧಗೊಂಡಿದ್ದವು. ಏಪ್ರಿಲ್ 25 ರಂದು ಮದುವೆ ನೆರವೇರಬೇಕಿತ್ತು. ಆದರೆ ಲಾಕ್ ಡೌನ್ ನಿಂದ ಇವರ ಮದುವೆಗೆ ಅನುಮತಿ ಸಿಗಲಿಲ್ಲ.

ಆದರೇನಂತೆ ಬೈಕ್ ಬಿಟ್ಟು ನೇರವಾಗಿ ಸೈಕಲ್  ತುಳಿಯುತ್ತಾ ನೂರಾರು ಕಿಲೋ ಮೀಟರ್ ಸಾಗಿ ವಧು ರಿಂಕಿ ಮನೆಗೆ ಕಲ್ಕು ತೆರಳಿದ್ದಾನೆ.

ರಿಂಕಿ ಇರುವ ಊರಿನ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿದ್ದಾನೆ. ಅಷ್ಟೇ ಅಲ್ಲ ಅದೇ ಸೈಕಲ್ ಮೇಲೆ ಮಡದಿಯನ್ನು ತನ್ನ ಮನೆಗೆ ಕರೆತಂದಿದ್ದಾನೆ.

ಅಂದ್ಹಾಗೆ ಉತ್ತರ ಪ್ರದೇಶದ ಹಮೀರ್ ಪುರ ಜಿಲ್ಲೆಯ ಪೌಥಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ನಲ್ಲಿ ಜನರ ಕಷ್ಟಕ್ಕೆ ಮಿಡಿದ ಪೊಲೀಸ್‌ ಹೃದಯ