ಆನ್ ಲೈನ್ ಗೇಮ್ ನಿಷೇಧ ಹೇರಿದಂತಹ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಇಂದು ಹೈಕೋರ್ಟ್ ವಿಭಾಗಿಯ ಪೀಠದಲ್ಲಿ ರಾಜ್ಯ ಸರ್ಕಾರದಿಂದ ಹೊರಡಿಸಲಾಗಿದ್ದಂತ ಆನ್ ಲೈನ್ ಗೇಮ್ ನಿಷೇಧದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆಯನ್ನು ನಡೆಸಲಾಯಿತು.
ಸರ್ಕಾರ ಹೊರಡಿಸಿದ್ದಂತ ಆನ್ ಲೈನ್ ಗೇಮ್ ಆದೇಶವನ್ನು ರದ್ದು ಪಡಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಆನ್ ಲೈನ್ ಗೇಮ್ ಆಟಕ್ಕೆ ಅನುಮತಿ ದೊರೆತಂತೆ ಆಗಿದೆ. ಅಂದಹಾಗೇ ರಾಜ್ಯ ಸರ್ಕಾರ ಈ ಹಿಂದೆ ಆನ್ ಲೈನ್ ಗೇಮ್ ಗಳನ್ನು ರದ್ದು ಪಡಿಸಿತ್ತು. ಈ ಮೂಲಕ ರಾಜ್ಯಾಧ್ಯಂತ ಆನ್ ಲೈನ್ ಆಟಕ್ಕೆ ಬ್ರೇಕ್ ಹಾಕಿತ್ತು. ಇದೀಗ ಹೈಕೋರ್ಟ್ ವಿಭಾಗೀಯ ಪೀಠವು ಸರ್ಕಾರದ ಆದೇಶವನ್ನು ರದ್ದುಪಡಿಸಿದೆ.