Publish Date: Sun, 14 Nov 2021 (18:33 IST)
Updated Date: Sun, 14 Nov 2021 (18:37 IST)
ಕಾನೂನಿನ ಮೇಲೆ ದಾಳಿ ಮಾಡಲಾಗಿದೆ. ಕಷ್ಟಗಳು ಬಂದರೆ ಅದು ಮೊದಲು ತಟ್ಟುವುದು ಬಡವರಿಗೆ. ಕಾಂಗ್ರೆಸ್ ಪಕ್ಷ ಯುವ ಜನತೆಯ ಯುವಶಕ್ತಿಯಾಗಿದೆ. ಅನ್ಯಾಯ ತಡೆಯಲು ದೇಶಕ್ಕೆ ಕಾಂಗ್ರೆಸ್ ಅವಶ್ಯಕತೆ ಇದೆ. ಎಲ್ಲ ವರ್ಗದವರಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಅಗತ್ಯ. ಬಲಿಷ್ಠ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್ ಅವಶ್ಯಕತೆ ಇದೆ. ಭಾರತ ದೇಶ ಎಲ್ಲ ವರ್ಗ, ಜಾತಿ, ಧರ್ಮದಿಂದ ಕೂಡಿದೆ ಎಂದು ರಣದೀಪ್ ಸುರ್ಜೇವಾಲ ಹೇಳಿಕೆ ನೀಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಸೋನಿಯಾ, ರಾಹುಲ್ ದೇಶದ ಪ್ರಧಾನಿ ಆಗಬಹುದಿತ್ತು. ಆದರೆ ದೇಶ ಉಳಿಯಲು ಆರ್ಥಿಕ ತಜ್ಞರು ಬೇಕೆಂದು ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದ್ರು. ಇಂತಹ ತ್ಯಾಗ ಮಾಡಿದವರು ಸೋನಿಯಾ ಗಾಂಧಿ. ದೇಶವನ್ನು ಬದಲಾವಣೆ ಮಾಡಿರುವುದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು. 50 ಲಕ್ಷ ಸದಸ್ಯತ್ವ ಅಭಿಯಾನ ಮಾಡುವಂತೆ ಕರೆ ನೀಡಿದ ಡಿಕೆಶಿ, ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಕಬ್ಬಿಣ ಆಗಬೇಕು. ಕಬ್ಬಿಣದಲ್ಲಿ ಕತ್ತರಿ, ಸೂಜಿ ಎರಡನ್ನೂ ಮಾಡಬಹುದು. ಬಿಜೆಪಿ ರಾಜ್ಯ ಕತ್ತರಿಸ್ತಿದ್ರೆ, ನೀವು ಸೂಜಿಯಾಗಿ ಹೊಲಿಯಿರಿ ಎಂದು ಹೇಳಿದರು.