Select Your Language

Notifications

webdunia
webdunia
webdunia
webdunia

ಹೊಗಳುಭಟ್ಟರಿಗೆ ಅನುದಾನ

Grants to Praise bearers
bangalore , ಮಂಗಳವಾರ, 19 ಏಪ್ರಿಲ್ 2022 (19:52 IST)
ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿರುವ ದಿಂಗಾಲೇಶ್ವರ ಸ್ವಾಮೀಜಿ, ಸಿಎಂ ಬಸವರಾಜ ಬೊಮ್ಮಾಯಿ ಕ್ಷೇತ್ರವೇ ಅಭಿವೃದ್ಧಿಯಾಗಿಲ್ಲ. ಇನ್ನು ರಾಜ್ಯದ ಅಭಿವೃದ್ಧಿ ಎಲ್ಲಿಂದ ಅಗುತ್ತೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿಯೇ ರಸ್ತೆಗಳು ಸರಿಯಾಗಿಲ್ಲ. ಇನ್ನು ಉತ್ತರ ಕರ್ನಾಟಕದ ಪರಿಸ್ಥಿತಿ ಹೇಗೆ ಚೆನ್ನಾಗಿರುತ್ತದೆ. ಚುನಾವಣೆ ಸಮಯದಲ್ಲಿ ಯದ್ವಾತದ್ವಾ ಹಣ ಚೆಲ್ಲುತ್ತಾರೆ. ಭ್ರಷ್ಟಾಚಾರ ಮಾಡಿ ದಾರಿ ತಪ್ಪುವುದಲ್ಲದೇ, ಜನರ ದಾರಿ ತಪ್ಪಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ರಾಜ್ಯದ ವೀರಶೈವ ಮಠಗಳಿಗೆ ಅನುದಾನ ಕೊಟ್ಟಿಲ್ಲ. ಮಠಾಧೀಶರು ಮನವಿ ಮಾಡಿದರೂ ಅನುದಾನ ಕೊಟ್ಟಿಲ್ಲ. ಹೊಗಳುಭಟ್ಟರಿಗೆ, ಧಮ್ಕಿ ಹಾಕಿದವರಿಗೆ ಅನುದಾನ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿಂಗಾಲೇಶ್ವರ ಶ್ರೀ ವಿರುದ್ಧ BSY ಗರಂ