Publish Date: Mon, 18 Apr 2022 (18:50 IST)
Updated Date: Mon, 18 Apr 2022 (18:54 IST)
ಮುಂದಿನ ವರ್ಷ 2023ರಲ್ಲಿ ಬಿಜೆಪಿ ಪಕ್ಷಕ್ಕೆ ರೈತರು, ಮಹಿಳೆಯರು ಮತ್ತು ಸಮಾಜದ ದುರ್ಬಲ ವರ್ಗದವರಿಂದ ಬೆಂಬಲ ವ್ಯಕ್ತವಾಗಲಿದ್ದು, ಸರ್ಕಾರದ ಉತ್ತಮ ಆಡಳಿತ ಈ ವರ್ಗದ ಜನರ ಮನ ತಟ್ಟಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹೊಸಪೇಟೆಯಲ್ಲಿ ಭಾರತೀಯ ಜನತಾ ಪಾರ್ಟಿ ವಿಜಯನಗರ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ವಿಜಯನಗರ ರಾಜ್ಯದ ಪವಿತ್ರ ಸ್ಥಳವಾಗಿದ್ದು, ಬಿಜೆಪಿ ನ್ಯಾಯದ ತತ್ವಗಳು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಆಧರಿಸಿ ಪ್ರಜಾಸತ್ತಾತ್ಮಕ ಯುದ್ಧವನ್ನು ಘೋಷಿಸಿದೆ ಎಂದು ಹೇಳಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಡಿಯಲ್ಲಿ ಅವರ ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟುಕೊಂಡು ನಾವು ಮುಂದಿನ ಹೆಜ್ಜೆಯಿಡೋಣ, ನಮ್ಮದೇ ಗೆಲುವು ಎಂದರು.