Select Your Language

Notifications

webdunia
webdunia
webdunia
webdunia

ಗದಗ ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಅದ್ಧೂರಿ ಸ್ವಾಗತ

ಸಿಎಂ ಸಿದ್ದರಾಮಯ್ಯ
ಬಾದಾಮಿ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ ತೆರಳುತ್ತಿರುವ ವೇಳೆ ಗದಗ ಜಿಲ್ಲೆಯ ರೋಣ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಿಎಂಗೆ ಅದ್ದೂರಿ ಸ್ವಾಗತದ ಮಹಾಪೂರವೇ ಹರಿದು ಬಂತು. 
ಬಿಡುವಿಲ್ಲದ ಸಮಯದಲ್ಲಿಯೂ ಕೂಡಾ ಸಿಎಂ ಗದಗ ಜಿಲ್ಲೆಯ ರೋಣ ಪಟ್ಟಣಕ್ಕೆ ಭೇಟಿ ನೀಡಿ ರೋಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ ಪರ ರೋಡ್ ಶೋ ನಡೆಸಿದ್ರು. 
 
ಬಾದಾಮಿಗೆ ತೆರಳಿದ ಸಿದ್ದರಾಮಯ್ಯಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬದಾಮಿಯಲ್ಲಿ ಗೆದ್ದು ಬರಲಿ ಎಂದು ಹೂವು ಹಾಗೂ ಭಂಡಾರವನ್ನು ಸಿಎಂ ಮೇಲೆ ತೂರಾಡಿದರು. 
 
ಅಭಿಮಾನಿಗಳ ಈ ಹಾರೈಕೆಯಿಂದ ಸಿಎಂ ಪುಲ್ ಖುಷ್ ಆಗಿ ನೆರೆದ ಅಭಿಮಾನಿಗಳಿಗೆ ಕೈಬೀಸಿ ನಮಸ್ಕರಿಸಿ ಬದಾಮಿಗೆ ನಾಮಪತ್ರ ಸಲ್ಲಿಸಲು ತೆರಳಿದರು. ಈ ವೇಳೆ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಾಹಸ ಪಡಬೇಕಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಎತ್ತಿನ ಬಂಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ