Publish Date: Sat, 09 Sep 2023 (11:08 IST)
Updated Date: Sat, 09 Sep 2023 (11:42 IST)
ಮಂಡ್ಯ : ಕೆಆರ್ಎಸ್ನಲ್ಲಿ ಗಣನೀಯ ಪ್ರಮಾಣದಲ್ಲಿ ನೀರು ಕಡಿಮೆ ಆಗುತ್ತಿರುವ ಹೊತ್ತಿನಲ್ಲಿ ತಮಿಳುನಾಡಿಗೆ ನೀರು ಹರಿಸುವುದನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ.
ಪ್ರಾಧಿಕಾರದ ಆದೇಶದ ಪ್ರಕಾರ ಸೆಪ್ಟೆಂಬರ್ 11 ರವರೆಗೂ ನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕಿತ್ತು. ಆದರೆ ಡ್ಯಾಂ ಕೆಳ ಭಾಗದಲ್ಲಿ ಮಳೆ ಆಗುತ್ತಿರುವ ಕಾರಣ ನಾಲ್ಕು ದಿನ ಮೊದಲೇ ಅಂದರೆ ಇಂದಿನಿಂದಲೇ ತಮಿಳುನಾಡಿಗೆ ನೀರು ಹರಿಸುವುದನ್ನು ಬಂದ್ ಮಾಡಿದೆ.
ಇಂದು ತಮಿಳುನಾಡಿಗೆ ನೀರು ಹರಿಸುವ ಬದಲು ರೈತರ ಬೆಳೆಗಳಿಗಾಗಿ ಕಾಲುವೆಗಳಿಗೆ ನೀರು ಹರಿಸಿದೆ. ಕಳೆದ 11 ದಿನದಲ್ಲಿ ತಮಿಳುನಾಡಿಗೆ 62 ಸಾವಿರ ಕ್ಯೂಸೆಕ್ ನೀರು ಹರಿದಿದೆ.