Select Your Language

Notifications

webdunia
webdunia
webdunia
webdunia

PRESS=ಒತ್ತಿ…? ಸರ್ಕಾರದ ಕಾರ್ಯಕ್ರಮದಲ್ಲೇ ತಪ್ಪು ಪದ ಬಳಕೆ

PRESS=ಒತ್ತಿ…? ಸರ್ಕಾರದ ಕಾರ್ಯಕ್ರಮದಲ್ಲೇ ತಪ್ಪು ಪದ ಬಳಕೆ
ಬೆಂಗಳೂರು , ಮಂಗಳವಾರ, 26 ಸೆಪ್ಟಂಬರ್ 2017 (00:01 IST)
ಬೆಂಗಳೂರು: ಸರ್ಕಾರಿ ಅಥವಾ ಖಾಸಗಿ ಯಾವುದೇ ಕಾರ್ಯಕ್ರಮ ಆಗಿರಲಿ. ಅಲ್ಲಿ ಮಾಧ್ಯಮದವರಿಗೆ ಪ್ರತ್ಯೇಕ ಆಸನಗಳನ್ನ ಮೀಸಲಿಟ್ಟಿರುತ್ತಾರೆ. ಆದರೆ ಇಂದು ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಆಯೋಜಕರು ಮಾಡಿದ ಎಡವಟ್ಟಿನಿಂದ ಸರ್ಕಾರ ತೀವ್ರ ಮುಜುಗರಕ್ಕೀಡಾಗಿದೆ.

ಇಂದು ಸಂಜೆ ಖಾಸಗಿ ಹೋಟೆಲ್ ವೊಂದರಲ್ಲಿ ನವ ಕರ್ನಾಟಕ ಮುನ್ನೋಟ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಮಾಧ್ಯಮದವರನ್ನು ಆಹ್ವಾನಿಸಲಾಗಿತ್ತು. ಇದಕ್ಕೆಂದೇ ಪ್ರತ್ಯೇಕ ಆಸನ ವ್ಯವಸ್ಥೆಯೂ ಇತ್ತು. ಮೀಡಿಯಾ ಗ್ಯಾಲರಿ ಎಂದು ಸೂಚಿಸಲು ನಾಮಫಲಕ ಹಾಕಲಾಗಿತ್ತು. ಈ ನಾಮಫಲಕದಲ್ಲಿ ಇಂಗ್ಲೀಷ್ ನಲ್ಲಿ PRESS ಎಂದಿತ್ತು. ಅದನ್ನೇ ಕನ್ನಡಕ್ಕೆ ಅನುವಾದಿಸುವಾಗ ಮಾಧ್ಯಮ ಎಂಬುದರ ಬದಲಾಗಿ `ಒತ್ತಿ’ ಎಂಬ ಪದ ಬಳಸಿದ್ದಾರೆ.
webdunia

ಇನ್ನು Additional Chief Secretaries ಎಂಬುದರ ಕನ್ನಡ ಅನುವಾದವನ್ನು ಅಪಾರ ಮುಖ್ಯ ಕಾರ್ಯದರ್ಶಿಗಳು ಎಂದು ಮಾಡಲಾಗಿದೆ. ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ಕಾರ್ಯಕ್ರಮ ಆಯೋಜಕರ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತಿವೆ.
webdunia

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಖಾರವಾಗಿ ಟ್ವೀಟ್ ಮಾಡಿದ್ದಾರೆ. `ಕರ್ನಾಟಕ ಸರ್ಕಾರದ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಕೊಟ್ಟ ಒಕ್ಕಣೆ ನೋಡಿ ಕಾಂಗ್ರೆಸ್ ಸರ್ಕಾರದಿಂದ ಕನ್ನಡ ಉಳಿವು ನಿರೀಕ್ಷಿಸಲು ಸಾಧ್ಯವೇ? ಎಂದು ಡಿವಿಎಸ್ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಗೆ ಮದ್ಯ ಕುಡಿಸಿ 2 ವರ್ಷ ಅತ್ಯಾಚಾರಗೈದ ಐವರು ಕಾಮುಕರು