Publish Date: Wed, 03 Jun 2026 (16:41 IST)
Updated Date: Wed, 03 Jun 2026 (16:43 IST)
ಬೆಂಗಳೂರು: ಡಿಕೆ ಶಿವಕುಮಾರ್ ಸಿಎಂ ಆಗಿರುವ ನೂತನ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ಡಾ ಜಿ ಪರಮೇಶ್ವರ್ ಮತ್ತು ಎಂಬಿ ಪಾಟೀಲ್ ಗೆ ಪ್ರಮಾಣ ವಚನದ ಬಳಿಕ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಇಂದು ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ಅವರ ಜೊತೆಗೆ ಉಪ ಮುಖ್ಯಮಂತ್ರಿಯಾಗಿ ಡಾ ಜಿ ಪರಮೇಶ್ವರ್ ಮತ್ತು ಸಚಿವರಾಗಿ ಎಂಬಿ ಪಾಟೀಲ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಡಾ ಜಿ ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನೀವು ಪ್ರಮಾಣ ಪತ್ರದಲ್ಲಿ ಇಲ್ಲದ ವಿಚಾರಗಳನ್ನು ಓದಿದ್ದೀರಿ ಎಂದು ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ಮುಖ್ಯ ಕಾರ್ಯದರ್ಶಿಗಳಿಗೂ ಈ ಬಗ್ಗೆ ಸೂಚನೆ ರವಾನಿಸಿದರು.
ನಂತರ ಬಂದ ಎಂಬಿ ಪಾಟೀಲ್ ಕೂಡಾ ಇದೇ ತಪ್ಪು ಪುನರಾವರ್ತಿಸಿದಾಗ ರಾಜ್ಯಪಾಲರು ಮತ್ತೆ ಅವರಿಗೆ ಕಿವಿ ಮಾತು ಹೇಳಿದರು. ಇದಕ್ಕೆ ವೇದಿಕೆಯಲ್ಲೇ ಎಂಬಿ ಪಾಟೀಲ್ ಕೂಡಾ ಸಮಜಾಯಿಷಿ ಕೊಡುವ ಪ್ರಯತ್ನ ಮಾಡಿದರು. ಬಳಿಕ ನಿರೂಪಣೆ ಮಾಡುತ್ತಿದ್ದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ರಾಜ್ಯಪಾಲರ ಸೂಚನೆಯನ್ನು ಬಹಿರಂಗವಾಗಿ ಘೋಷಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ