Publish Date: Tue, 02 Jun 2020 (10:27 IST)
Updated Date: Tue, 02 Jun 2020 (10:28 IST)
ಬೆಂಗಳೂರು : ಶಾಲೆಗಳ ಪುನಾರಂಭ ಮಾಡುವ ಬಗ್ಗೆ ಚಿಂತನೆ ನಡೆದಿರುವುದಾಗಿ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಶಾಲೆಗಳನ್ನು ಪುನಾರಂಭ ಮಾಡಬಹುದಾದ ದಿನಾಂಕದ ಬಗ್ಗೆ ಚರ್ಚೆ ನಡೆಸಲಾಗಿದೆ. ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಧಾನ, ಕೈಗೊಳ್ಳಬೇಕಾದ ಸುರಕ್ಷಿತಾ ಕ್ರಮಗಳ ಬಗ್ಗೆ ಎಸ್ ಡಿಎಂಸಿ ಸದಸ್ಯರು, ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗುವುದು. ಜೂನ್ 12ರೊಳಗೆ ಅಭಿಪ್ರಾಯ ಸಂಗ್ರಹಿಸಲು ಸೂಚನೆ ನೀಡಲಾಗಿದೆ. ಅಭಿಪ್ರಾಯ ಬಂದ ಬಳಿಕ ದಿನಾಂಕ ಘೋಷಿಸಬಹುದು ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
pavithra
Publish Date: Tue, 02 Jun 2020 (10:27 IST)
Updated Date: Tue, 02 Jun 2020 (10:28 IST)