Select Your Language

Notifications

webdunia
webdunia
webdunia
webdunia

ಅತೃಪ್ತರ ನಿರ್ವಹಣೆಗೆ ಸಿಎಂ ಬಿಎಸ್ ವೈಗೆ ಹೈಕಮಾಂಡ್ ಬಲ

ಸಿಎಂ ಯಡಿಯೂರಪ್ಪ
ಬೆಂಗಳೂರು: ಕೊರೋನಾ ನಿಯಂತ್ರಣದ ತಲೆನೋವಿನ ನಡುವೆಯೇ ಸಿಎಂ ಯಡಿಯೂರಪ್ಪಗೆ ರಾಜ್ಯ ಬಿಜೆಪಿ ನಾಯಕರ ಅಸಮಾಧಾನ ನುಂಗಲಾರದ ತುತ್ತಾಗಿತ್ತು. ಆದರೆ ಇದೀಗ ಯಡಿಯೂರಪ್ಪನವರಿಗೆ ಹೈಕಮಾಂಡ್ ನ ಶ್ರೀರಕ್ಷೆ ದೊರೆತಿದೆ.


ಕೊರೋನಾ ನಿಯಂತ್ರಣದ ನಡುವೆ ಅತೃಪ್ತರ ಬಂಡಾಯ ಶಮನ ಮಾಡುವುದು ಸವಾಲಾಗಿತ್ತು. ಆದರೆ ಇವರ ಬಗ್ಗೆ ನೀವು ತಲೆಕೆಡಿಸಿಕೊಳ್ಳದೇ ಕೊರೋನಾ ನಿಯಂತ್ರಣದ ಬಗ್ಗೆ ಮಾತ್ರ ಗಮನ ಕೊಡಿ. ಅತೃಪ್ತರನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೈಕಮಾಂಡ್ ಭರವಸೆ ನೀಡಿರುವುದು ಯಡಿಯೂರಪ್ಪನವರಿಗೆ ಆನೆ ಬಲ ಬಂದಂತಾಗಿದೆ.

ಹೀಗಾಗಿ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲೂ ಬಂಡಾಯದ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಕೊರೋನಾ ನಿಯಂತ್ರಣದ ಬಗ್ಗೆ ಮಾತ್ರ ನನ್ನ ಗಮನವಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ದೇಶಕ್ಕೆ ‘ಭಾರತ’ ಹೆಸರು ಖಾಯಂ: ಸುಪ್ರೀಂಕೋರ್ಟ್ ನಲ್ಲಿ ಇಂದು ತೀರ್ಪು