ಬಿಜೆಪಿ ಜನರ ಆಶೀರ್ವಾದದಿಂದಲ್ಲ ಕಳ್ಳತನ ಮಾಡಿದ ಸರ್ಕಾರ : ರಾಹುಲ್ ಮನವಿ
ಚಿಕ್ಕಮಗಳೂರು , ಬುಧವಾರ, 3 ಮೇ 2023 (09:08 IST)
ಚಿಕ್ಕಮಗಳೂರು : ಬಿಜೆಪಿಯವರಿಗೆ 40 ಅಂದರೆ ತುಂಬಾ ಪ್ರೀತಿ. ಹಾಗಾಗಿ, ಅವರಿಗೆ ಈ ಬಾರಿ 40 ಸ್ಥಾನಗಳನ್ನಷ್ಟೆ ಕೊಡಿ, ಕಾಂಗ್ರೆಸ್ಸಿಗೆ 150 ಸ್ಥಾನ ಕೊಡಿ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತದಾರರಿಗೆ ಮನವಿ ಮಾಡಿದ್ದಾರೆ.
ನಗರದ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ ವೃತ್ತದವರೆಗೆ ರೋಡ್ ಶೋ ನಡೆಸಿ ಬಳಿಕ ತೆರದ ವಾಹನದಲ್ಲಿ ಬಹಿರಂಗವಾಗಿ ಭಾಷಣ ಮಾಡಿದ ರಾಹುಲ್ ಗಾಂಧಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.