Publish Date: Fri, 16 Jun 2023 (15:31 IST)
Updated Date: Fri, 16 Jun 2023 (15:35 IST)
ಕಲ್ಬುರ್ಗಿಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ದಾರುಣ್ಯ ಹತ್ಯೆಯಾಗಿದೆ.ಇದನ್ನ ನಾನು ಖಂಡಿಸ್ತೇನೆ.ಮರಳು ಮಾಫಿಯಾ ತಡೆಗಟ್ಟುವ ಸದಸ್ಯನಾಗಿ ಪೊಲೀಸ್ ಕಾನ್ಸ್‌ಟೇಬಲ್ ಕೆಲಸ ಮಾಡ್ತಿದ್ರು.ಅವರ ಮೇಲೆ ಏಕಾಏಕಿ ಟ್ರಾಕ್ಟರ್ ಹರಿಸಿ ಹತ್ಯೆ ಮಾಡಲಾಗಿದೆ ಎಂದು ಆರ್ ಅಶೋಕ್ ಆರೋಪ ಮಾಡಿದ್ದಾರೆ.
ಅಲ್ಲಿನ ಎಸ್ಪಿ ಅವರೇ ಕಣ್ಣೀರು ಹಾಕಿದ್ದಾರೆ.ಎಸ್ಪಿ ಅವರೇ ಅಸಹಾಯಕರಾಗಿದ್ದಾರೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಈ ರೀತಿ ಗೂಂಡಾ ವರ್ತನೆ ಆರಂಭವಾಗಿದೆ.ಡಿಕೆಶಿ ಅವರು ಹಿಂದೆ ಹೇಳಿದ್ರು ಪೊಲೀಸರೇ ಎಚ್ಚರ ನಾವು ಬರ್ತಿದ್ದೀವಿ ಅಂತ.ಸರ್ಕಾರ ಕೂಡಲೇ ಇಂತವರ ಮೇಲೆ ಕ್ರಮ ಕೈಗೊಳ್ಳಬೇಕು.ಈ ರೀತಿಯ ವರ್ತನೆಗೆ ಕಡಿವಾಣ ಹಾಕಬೇಕು ಎಂದು ಮಾಜಿ ಸಚಿವ ಆರ್ ಅಶೋಕ್ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.