Select Your Language

Notifications

webdunia
webdunia
webdunia
webdunia

ಗೂಡ್ಸ್ ಶೆಡ್ ರೋಡ್ ಇಂದಿನಿಂದ ಸಂಚಾರಕ್ಕೆ ಮುಕ್ತ

Goods Shed Road is open for traffic from today
bangalore , ಗುರುವಾರ, 7 ಜುಲೈ 2022 (20:45 IST)
ಗೂಡ್ಸ್ ಶೆಡ್ ರೋಡ್ ಇಂದಿನಿಂದ ಸಂಚಾರಕ್ಕೆ ಮುಕ್ತವಾಗಿದ್ದು, ವಾಹನ ಸವಾರರಲ್ಲಿ ಸಂತಸ ಸಮಾಧಾನ ಮನೆ ಮಾಡಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ. ಗೂಡ್ಸ್ ಶೆಡ್ ರಸ್ತೆಯೂ ಮೈಸೂರು ರಸ್ತೆ-ಚಾಮರಾಜಪೇಟೆಯಿಂದ ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಡೆ ಪ್ರಮುಖ ರಸ್ತೆಗಳಿಗೆ ಇದು  ಸಂಪರ್ಕ ಕಲ್ಪಿಸುತ್ತದೆ. ಈ ಗೂಡ್ಸ್ ಶೆಡ್ ರಸ್ತೆಗೆ 11 ಕೋಟಿ ವೆಚ್ಚದಲ್ಲಿ 1.3 ಕಿಲೋ ಮೀಟರ್ ಉದ್ಧಕ್ಕೆ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಈ ಕಾರಣಕ್ಕೆ ಗೂಡ್ಸ್ ಶೆಡ್ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಭಾರಿ ಟ್ರಾಫಿಕ್ ಜಾಮ್ನಿಂದಾಗಿ ವಾಹನ ಸವಾರರು ಪರದಾಟ ನಡೆಸಿದ್ದರು. ಮೂರು ತಿಂಗಳಲ್ಲಿ ಮುಗಿಯಬೇಕಿದ್ದ ಗೂಡ್ಸ್ ಶೆಡ್ ರಸ್ತೆಯ  ಕಾಮಗಾರಿ ಕೊನೆಗೂ ಮುಕ್ತಾಯಗೊಂಡಿದ್ದು, ಇಂದಿನಿಂದ ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಕೆರೆಗೆ ಮಲಮೂತ್ರ ಕೊಳಚೆ ತ್ಯಾಜ್ಯನೀರು ಬಿಟ್ಟು ಮೂಕಪ್ರಾಣಿಗಳ ಬಲಿಪಡೆದ ಪ್ರಾವಿಡೆಂಟ್ ಅಪಾರ್ಟ್ಮೆಂಟ್