Publish Date: Fri, 09 Dec 2022 (19:50 IST)
Updated Date: Fri, 09 Dec 2022 (19:54 IST)
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಹೊಸದಾಗಿ ಪರಿಚಯಿಸಿರುವ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕ್ಯೂಆರ್ ಟಿಕೆಟ್ ಪಡೆದು ನವೆಂಬರ್ ತಿಂಗಳಿನಲ್ಲಿ 2.1 ಲಕ್ಷ ಜನರು ಪ್ರಯಾಣಿಸಿದ್ದಾರೆ. ನವೆಂಬರ್ 1 ರಂದು ಹೊಸ ಸೌಲಭ್ಯವನ್ನು ಪ್ರಾರಂಭಿಸಲಾಗಿತ್ತು. ಬಿಎಂಆರ್‌ಸಿಎಲ್ ಪ್ರಕಾರ, ಕ್ಯೂಆರ್ ಕೋಡ್ ಬಳಸಿ ಪ್ರಯಾಣಿಸಿದವರ ಸಂಖ್ಯೆ ನವೆಂಬರ್ ಮೊದಲ ವಾರದಲ್ಲಿ ನಿತ್ಯದ ಸರಾಸರಿ 3,167 ಇತ್ತು. ಎರಡು, ಮೂರು ಹಾಗೂ ನಾಲ್ಕನೇ ವಾರದಲ್ಲಿ ಕ್ರಮವಾಗಿ 6,365, 9,070 ಮತ್ತು 10,100 ಪ್ರಯಾಣಿಕರು ಕ್ಯೂಆರ್ ಕೋಡ್ ಬಳಸಿ ಪ್ರಯಾಣಿಸಿದ್ದಾರೆ. ಪ್ರತಿ ವಾರವು ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದು ಕಂಡು ಬಂದಿದೆ.