Select Your Language

Notifications

webdunia
webdunia
webdunia
webdunia

ಚಿಕ್ಕಮಗಳೂರಿನಿಂದ ತಿರುಪತಿಗೆ ಪ್ರಯಾಣ ಬೆಳೆಸುವವರಿಗೆ ರೈಲ್ವೆ ಇಲಾಖೆಯಿಂದ ಗುಡ್‌ನ್ಯೂಸ್‌

ಭಾರತ ರೈಲ್ವೇ ಇಲಾಖೆ

Sampriya

ಬೆಂಗಳೂರು , ಗುರುವಾರ, 10 ಜುಲೈ 2025 (17:28 IST)
ಬೆಂಗಳೂರು: ಕರ್ನಾಟಕದ ಮಲೆನಾಡು ಪ್ರದೇಶ ಹಾಗೂ ಆಂಧ್ರಪ್ರದೇಶದ ತಿರುಪತಿಗೆ ರೈಲ್ವೆ ಸಂಪರ್ಕವನ್ನು ವಿಸ್ತರಿಸುವ ಉದ್ದೇಶದಿಂದ ರೈಲ್ವೆ ಮಂಡಳಿ ಇದೀಗ ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆ ಪ್ರಾರಂಭಕ್ಕೆ ಅನುಮೋದನೆ ನೀಡಿದೆ.

ಈ ಸೇವೆಯ ಪ್ರಾರಂಭವನ್ನು ಸೂಚಿಸುವಂತೆ, ದಕ್ಷಿಣ ಮಧ್ಯ ರೈಲ್ವೆ ಒಂದು ಬಾರಿ ನಡೆಯುವ ಉದ್ಘಾಟನಾ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ನಡೆಸಲಿದೆ. ರೈಲು ಸಂಖ್ಯೆ 07424 ಚಿಕ್ಕಮಗಳೂರು– ತಿರುಪತಿ ಉದ್ಘಾಟನಾ ವಿಶೇಷ ಎಕ್ಸ್‌ಪ್ರೆಸ್ ಜುಲೈ 11 (ಶುಕ್ರವಾರ) ರಂದು ಚಲಿಸಲಿದ್ದು, ಮಧ್ಯಾಹ್ನ 12 ಕ್ಕೆ ಚಿಕ್ಕಮಗಳೂರಿನಿಂದ ಹೊರಟು, ಮರುದಿನ ಬೆಳಗ್ಗೆ 02:30 ಕ್ಕೆ ತಿರುಪತಿಗೆ ತಲುಪಲಿದೆ.

ಈ ರೈಲಿಗೆ ಒಟ್ಟು 18 ಎಲ್‌ಹೆಚ್‌ಬಿ ಕೋಚ್‌ಗಳು ಇರುತ್ತವೆ. 

ನಿಯಮಿತ ರೈಲು ಸೇವೆಗಳು:

1. ರೈಲು ಸಂಖ್ಯೆ 17423 ತಿರುಪತಿ – ಚಿಕ್ಕಮಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ 2025 ಜುಲೈ 17 (ಗುರುವಾರ)ರಿಂದ ನಿಯಮಿತ ಸೇವೆ ಪ್ರಾರಂಭವಾಗಲಿದೆ.
2. ರೈಲು ಸಂಖ್ಯೆ 17424 ಚಿಕ್ಕಮಗಳೂರು – ತಿರುಪತಿ ಸಾಪ್ತಾಹಿಕ ಎಕ್ಸ್‌ಪ್ರೆಸ್ 2025 ಜುಲೈ 18 (ಶುಕ್ರವಾರ)ರಿಂದ ನಿಯಮಿತ ಸೇವೆ ಆರಂಭವಾಗಲಿದೆ.

ರೈಲು ಸಂಖ್ಯೆ 17424 ಚಿಕ್ಕಮಗಳೂರು – ತಿರುಪತಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ಪ್ರತಿ ಶುಕ್ರವಾರ ಸಂಜೆ 17:30 ಕ್ಕೆ ಚಿಕ್ಕಮಗಳೂರಿನಿಂದ ಹೊರಟು, ಶನಿವಾರ ಬೆಳಗ್ಗೆ 07:40 ಕ್ಕೆ ತಿರುಪತಿಗೆ ತಲುಪಲಿದೆ. ಈ ಮಾರ್ಗದಲ್ಲಿ ರೈಲು ಈ ನಿಲ್ದಾಣಗಳಲ್ಲಿ ನಿಲ್ಲಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬದಲಾವಣೆ, ಸುಮ್ಮನೇ ಡ್ರಾಮಾ ಕಂಪನಿ ಓಪನ್ ಮಾಡಕ್ಕೆ ಇಷ್ಟವಿಲ್ಲ: ಜಿ ಪರಮೇಶ್ವರ್‌