Webdunia - Bharat's app for daily news and videos

Install App

ಕೆಎಸ್ ಆರ್ ಟಿಸಿಯಿಂದ ಮಹಿಳಾ ಉದ್ಯೋಗಿಗಳಿಗೆ ಗುಡ್ ನ್ಯೂಸ್

Webdunia
ಬುಧವಾರ, 19 ಜನವರಿ 2022 (20:28 IST)
ಬೆಂಗಳೂರು :- 180 ದಿನಗಳ ಶಿಶುಪಾಲನಾ ರಜೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಹಿಳಾ‌ ಸಿಬ್ಬಂದಿಗೆ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ.
ರಾಜ್ಯ ಸರಕಾರಿ ಮಹಿಳಾ ನೌಕರರಿಗೆ ಚಾಲ್ತಿಯಲ್ಲಿರುವ ಪ್ರಸೂತಿ ರಜೆಯೊಂದಿಗೆ ಒಟ್ಟು ಸೇವಾವಧಿಯಲ್ಲಿ ಆರು ತಿಂಗಳವರೆಗೆ ಅಂದರೆ 180 ದಿನಗಳ ಶಿಶುಪಾಲನಾ ರಜೆಯನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ.
ನಿಗಮದ ಮಹಿಳಾ ನೌಕರರು ಹೊಂದಿಡ ಮಕ್ಕಳ ಸಂಖ್ಯೆ ಪರಿಗಣಿಸದೆ ಅತ್ಯಂತ ಕಿರಿಯ ಮಗುವು 18 ವರ್ಷ ತಲುಪುವವರೆಗೆ ಅವಧಿಗೆ ಮಾತ್ರ ರಜೆ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.
ರಜೆ ಅವಧಿಯಲ್ಲಿ ಮಹಿಳಾ‌ ಸಿಬ್ಬಂದಿ ರಜೆ ಮೇಲೆ ಹೋಗುವ ನಿಕಟಪೂರ್ವದಲ್ಲಿ ಪಡೆಯಲು ಅರ್ಹರಿರುವ ಸಂಪೂರ್ಣ ವೇತನಕ್ಕೆ ಸಮನಾದ ರಜೆ ಸಂಬಳಕ್ಕೆ‌ ಅರ್ಹರಾಗಿರುತ್ತಾರೆ.
ಈ ರಜೆಯನ್ನು ಯಾವುದೇ ರಜೆ ಲೆಕ್ಕದಿಂದ ಕಳೆಯತಕ್ಕದ್ದಲ್ಲ. ಉಪಯೋಗಿಸಿಕೊಳ್ಳದ ಈ ಸೌಲಭ್ಯದ ಸಂಬಂಧದಲ್ಲಿನ ರಜೆಯನ್ನು ಗಳಿಕೆ ರಜೆ ಲೆಕ್ಕಕ್ಕೆ ಸೇರಿಸಲು, ನಗದೀಕರಿಸಲು ಅವಕಾಶ ಇರುವುದಿಲ್ಲ ಎಂದು ಹೇಳಲಾಗಿದೆ.
ಶಿಶುಪಾಲನಾ ರಜೆ ಮಂಜೂರಾತಿಗೆ ಯಾವುದೇ ಪೂರಕ ದಾಖಲೆಗಳನ್ನು ಪಡೆಯುವ ಅವಶ್ಯಕತೆಯಿಲ್ಲ. ಸೇವಾ ಪುಸ್ತಕದಲ್ಲಿ ನಮೂದಿಸಿದ ಮಕ್ಕಳ ವಿವರಗಳ‌ ಆಧಾರದ ಮೇಲೆ ಮಂಜೂರು ಮಾಡತಕ್ಕದ್ದು.
ಪ್ರತಿ ಬಾರಿ ಈ ರಜೆ ಮಂಜೂರಾತಿಯು ಕನಿಷ್ಠ 15 ದಿನಗಳಿಗಿಂತ ಕಡಿಮೆ ಇರಬಾರದು. ಮಹಿಳಾ ನೌಕರರು ಈ ರಜೆಯನ್ನು ಸಾಂದರ್ಭಿಕ ರಜೆಯ ಹೊರತಾಗಿ ನಿಯಮಾನುಸಾರ ಪಡೆಯಲು ಅರ್ಹರಿರುವ ಅಸಾಧಾರಣ ರಜೆ ಒಳಗೊಂಡಂತೆ ಇತರೆ ರಜೆಯೊಂದಿಗೆ‌ ಸಂಯೋಜಿಸಿ ಪಡೆಯಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನರೇಂದ್ರ ಮೋದಿ ಮತ್ತು ದೇವೇಗೌಡರದು ಜನ್ಮಜನ್ಮದ ಅನುಬಂಧ: ವಿಜಯೇಂದ್ರ ಬಣ್ಣನೆ

ಚಿನ್ನಯ್ಯ ತಂದ ಬುರುಡೆ ಮೂಲ ತನಿಖೆ: ಸೌಜನ್ಯ ಮಾವ ವಿಠಲ್‌ ಗೌಡಗೆ ಡವಡವ

ಮುಂದೊಂದು ದಿನ ಭಾರತ, ಪಾಕ್ ಆಗಲಿದೆ: ಹಿಂದೂಗಳಿಗೆ ಎಚ್ಚರಿಕೆ ನೀಡಿದ ಕಲ್ಲಡ್ಕ ಭಟ್

ಎನ್‌ಡಿಎ ಸಂಸದರಿಗೆ ಮೋದಿ ನಿವಾಸದಲ್ಲಿ ಆಯೋಜಿಸಿದ್ದ ಔತಣಕೂಟ ದಿಢೀರ್ ರದ್ದು, ಕಾರಣ ಏನು ಗೊತ್ತಾ

ಒಳಮೀಸಲಾತಿ ವಿಚಾರವಾಗಿ ಸೆ10 ರಿಂದ ಬಿಜೆಪಿ ಹೋರಾಟ

ಮುಂದಿನ ಸುದ್ದಿ
Show comments