ಬೆಂಗಳೂರು: ಮಳೆಯಾಗುತ್ತಿದ್ದ ಹಾಗೇ ಪ್ರಕೃತಿ ಸೌಂದರ್ಯ ಸವಿಯಲು ಹೋಗುವವರ ಪ್ರವಾಸಿಗರ ದಂಡು ಕೂಡಾ ಹೆಚ್ಚಾಗುತ್ತಿದೆ. ಇದೀಗ ಅರಣ್ಯ ಇಲಾಖೆ ವಿವಿಧ ಚಾರಣ ಪಥಗಳಿಗೆ ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಅರಣ್ಯ ಇಲಾಖೆಯಿಂದ ವಿವಿಧ ಚಾರಣ ಪಥಗಳಿಗೆ ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಸಾವಿರಾರು ಚಾರಣಿಗರು ಒಮ್ಮೆಲೇ ಆಗಮಿಸಿ ಗೊಂದಲ ಉಂಟಾಗದಂತೆ ತಡೆಯಲು ಆನ್‌ಲೈನ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.
ಮಳೆ ಕಾರಣಕ್ಕೆ ಅಪಾಯ ಸಂಭವಿಸದಿರಲು, ಜೀವ ಪರಿಸರಕ್ಕೂ ಹಾನಿಯಾಗದಿರಲು ಆಗಸ್ಟ್‌ನಿಂದ ಚಾರಣಕ್ಕೆ ಮರುಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನೂ ಮಳೆ ಬರುತ್ತಿರುವ ಹಿನ್ನೆಲೆ ವೀಕೆಂಡ್‌ನಲ್ಲಿ ಪ್ರಕೃತಿಯನ್ನು ಸವಿಯಲು ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲೂ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಮುನ್ನೆಚ್ಚರಿಕ ಕ್ರಮವಾಗಿ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.