ಸರ್ಕಾರಿ ನೌಕರರು, ಗುತ್ತಿಗೆದಾರರಿಗೆ ಗುಡ್ ನ್ಯೂಸ್: ಆರೋಗ್ಯ ಇಲಾಖೆಯಿಂದ ಭರ್ಜರಿ ಆಫರ್

Krishnaveni K
ಶುಕ್ರವಾರ, 20 ಜೂನ್ 2025 (10:34 IST)
ಬೆಂಗಳೂರು: ಸರ್ಕಾರಿ ಇಲಾಖೆಗಳ ನೌಕರರು ಮತ್ತು ಗುತ್ತಿಗೆದಾರರಿಗೆ ಆರೋಗ್ಯ ಇಲಾಖಯಿಂದ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಇನ್ನು ನೌಕರರ ಆರೋಗ್ಯ, ಆಸ್ಪತ್ರೆ ಖರ್ಚು ವೆಚ್ಚಗಳ ಹೊರೆ ಕಡಿಮೆಯಾಗಲಿದೆ.
 

ಆರೋಗ್ಯ ಇಲಾಖೆ ಸರ್ಕಾರಿ ನೌಕರರು ಮತ್ತು ಗುತ್ತಿಗೆದಾರರಿಗೆ ಹೊಸ ಆರೋಗ್ಯ ಯೋಜನೆ ಜಾರಿಗೆ ತಂದಿದೆ. ನೌಕರರು, ಗುತ್ತಿಗೆದಾರರಿಗೆ ಆರೋಗ್ಯ ಭದ್ರತೆ ಯೋಜನೆ ತರಲಾಗಿದ್ದು ಇದರಡಿಯಲ್ಲಿ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ. ಇಂತಹದ್ದೊಂದು ಐತಿಹಾಸಿಕ ನಿರ್ಣಯಕ್ಕೆ ನಿನ್ನೆಯ ಕ್ಯಾಬಿನೆಟ್ ಸಭೆಯಲ್ಲಿ ಅಂಕಿತ ಹಾಕಲಾಗಿದೆ.

ಸುವರ್ಣ ಆರೋಗ್ಯ ಟ್ರಸ್ಟ್ ಯೋಜನೆ ಮುಖಾಂತರ ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ನೌಕರರು ಮತ್ತು ಅವರ ಅವಲಂಬಿತರು 5 ಲಕ್ಷ ರೂ.ವರೆಗೆ ಚಿಕಿತ್ಸಾ ಸೌಲಭ್ಯ ಪಡೆದುಕೊಳ್ಳಬಹುದು. ಇದು ಸುಮಾರು 3 ಲಕ್ಷ ನೌಕರರಿಗೆ ಪರಯೋನವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಈ ಯೋಜನೆಯು ಇಎಸ್ಐಸಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಮುಂತಾದ ಯಾವುದೇ ಆರೋಗ್ಯ ಯೋಜನೆಯಲ್ಲಿ ಇಲ್ಲದ ನೌಕರರಿಗೆ ಅನ್ವಯವಾಗಲಿದೆ. ಈ ಯೋಜನೆಗಾಗಿ ಪ್ರತೀ ತಿಂಗಳು ನೌಕರರ ವೇತನದಿಂದ ಸುಮಾರು 100 ರೂ. ಕಡಿತ ಮಾಡಲಾಗುತ್ತದೆ. ಉಳಿದ 100 ರೂ. ಸರ್ಕಾರ ಭರಿಸಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಕೆ ಶಿವಕುಮಾರ್

ಇದೊಂದು ಮರೆಯಲಾಗದ ಅನುಭವ: ದ್ರೌಪದಿ ಮುರ್ಮು

ನಾಳೆ ನಾನು ಬೆಂಗಳೂರಿನಲ್ಲಿ ಲಭ್ಯವಿದ್ದೇನೆ, ಹೀಗಂದಿದ್ಯಾಕೆ ಸ್ಪೀಕರ್ ಯುಟಿ ಖಾದರ್

ರಾಜ್ಯದ ಸಿಎಂ ಇವರೇ ಆಗೋದು ಎಂದು ಭವಿಷ್ಯ ನುಡಿದ ಬಸನಗೌಡ ಪಾಟೀಲ ಯತ್ನಾಳ

ಮತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವೇದಿಕೆಯಲ್ಲಿ ನೃತ್ಯ ಮಾಡಕ್ಕೂ ಸೈ: ರಾಹುಲ್ ಗಾಂಧಿ ವ್ಯಂಗ್ಯ

ಮುಂದಿನ ಸುದ್ದಿ
Show comments