ಪಾಕಿಸ್ತಾನವನ್ನು ನೈಸ್ ಮಾಡುತ್ತಿರುವ ಡೊನಾಲ್ಡ್ ಟ್ರಂಪ್ ಗಿದೆ ಖತರ್ನಾಕ್ ಪ್ಲ್ಯಾನ್

Krishnaveni K
ಶುಕ್ರವಾರ, 20 ಜೂನ್ 2025 (10:06 IST)
Photo Credit: X
ನ್ಯೂಯಾರ್ಕ್: ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಫ್ ಮುನೀರ್ ನನ್ನು ತಮ್ಮ ದೇಶಕ್ಕೆ ಕರೆಯಿಸಿಕೊಂಡು ರಾಜಾತಿಥ್ಯ ನೀಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ಲ್ಯಾನ್ ಬೇರೆಯೇ ಇದೆ.  

ಲಾಭವಿಲ್ಲದೇ ಅಮೆರಿಕಾ ಯಾವ ಕೆಲಸವನ್ನೂ ಮಾಡುವ ದೇಶವಲ್ಲ ಎಂಬುದು ಜಗತ್ತಿಗೇ ಗೊತ್ತಿದೆ. ಈಗ ಐ ಲವ್ ಪಾಕಿಸ್ತಾನ್ ಎನ್ನುತ್ತಿರುವುದಕ್ಕೂ ಆ ದೇಶದ ಸೇನಾ ಮುಖ್ಯಸ್ಥನನ್ನು ಕರೆದು ಆತಿಥ್ಯ ಕೊಟ್ಟಿರುವುದಕ್ಕೂ ಅಂತಹದ್ದೇ ಕಾರಣವಿದೆ.

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಈಗ ಅಮೆರಿಕಾ ಇಸ್ರೇಲ್ ಪರ ನಿಂತಿದೆ. ಇನ್ನೇನು ಮಾತು ಕೇಳದಿದ್ದರೆ ಇರಾನ್ ಮೇಲೆ ಯುದ್ಧ ಸಾರಲೂ ಅಮೆರಿಕಾ ಸನ್ನದ್ಧವಾಗಿದೆ. ಈ ವಾರಂತ್ಯಕ್ಕೇ ಅಮೆರಿಕಾ ಇರಾನ್ ಮೇಲೆ ದಾಳಿ ನಡೆಸಬಹುದು ಎಂಬ ಸುದ್ದಿಯಿದೆ.

ಈ ನಡುವೆ ಇರಾನ್ ಮೇಲೆ ದಾಳಿ ನಡೆಸಬೇಕು ಎಂದರೆ ಅಮೆರಿಕಾಗೆ ಅದರ ನೆರೆಯ ರಾಷ್ಟ್ರ ಪಾಕಿಸ್ತಾನದ ಸಹಾಯ ಬೇಕು. ಪಾಕಿಸ್ತಾನದ ವಾಯುನೆಲೆಗಳನ್ನು ಬಳಸಿಯೇ ಅಮೆರಿಕಾ ಯುದ್ಧ ಮಾಡಬೇಕು. ಆದರೆ ಪಾಕಿಸ್ತಾನ ತನ್ನ ನೆರೆಯ ರಾಷ್ಟ್ರ ಇರಾನ್ ಗೆ ಬೆಂಬಲ ನೀಡುತ್ತಿದೆ. ಇರಾನ್ ವಿರುದ್ಧ ದಾಳಿ ನಡೆಸಬೇಕು ಎಂದರೆ ಅಮೆರಿಕಾಗೆ ಈಗ ಪಾಕಿಸ್ತಾನದ ಸಹಾಯ ಬೇಕೇ ಬೇಕು.

ಇದೇ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಬಾಯಲ್ಲಿ ಈಗ ಪಾಕಿಸ್ತಾನದ ಜಪ ಜೋರಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಎಲ್ಲರನ್ನು ಬಿಟ್ಟು ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನೇ ಕರೆದು ರಾಜಾತಿಥ್ಯ ನೀಡಿದೆ. ಪಾಕಿಸ್ತಾನದಲ್ಲಿ ಸೇನಾ ಮುಖ್ಯಸ್ಥನಿಗೆ ಅಷ್ಟು ಪವರ್ ಇದೆ. ಅಲ್ಲಿ ಆಡಳಿತ ಮಾಡುವವರಿಗಿಂತಲೂ ಸೇನಾಧಿಕಾರಿಗಳೇ ಪವರ್ ಫುಲ್. ಹೀಗಾಗಿ ಅಮೆರಿಕಾ ಎಲ್ಲಿ ಹೊಡೆಯಬೇಕೋ ಅಲ್ಲೇ ಹೊಡೆದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ನಕಲಿ ತುಪ್ಪ‌ ಮಾರಾಟ ಜಾಲದ ಕಿಂಗ್‌ ಪಿನ್‌ ದಂಪತಿ ಸಿಸಿಬಿ ಬಲೆಗೆ

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಾವು ವದಂತಿ: ಅಡಿಯಾಲಾ ಜೈಲಿನ ಮುಂದೆ ಹೈಡ್ರಾಮಾ

ಈ ವಿಚಾರಕ್ಕೆ ರಾಹುಲ್, ಸೋನಿಯಾ ಭೇಟಿಯಾಗಬೇಕೆಂದ ಮಲ್ಲಿಕಾರ್ಜುನ ಖರ್ಗೆ

ದೆಹಲಿ ಸ್ಪೋಟ, ಇಂದು ಬಂಧಿಯಾಗಿರುವ ಆರೋಪಿಯ ಕೈವಾಡ ಕೇಳಿದ್ರೆ ಶಾಕ್ ಆಗುತ್ತೆ

ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಬಿಗ್‌ ರಿಲೀಫ್‌, ತೀರ್ಪು ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ
Show comments