Webdunia - Bharat's app for daily news and videos

Install App

ಗೋಣಿಕೊಪ್ಪಲು: ಕಾಡಾನೆ ದಾಳಿಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು, ಸೈಕಲ್‌ನಲ್ಲಿದ್ದವ ಪಾರಾಗಿದ್ದೆ ಪವಾಡ

Sampriya
ಮಂಗಳವಾರ, 8 ಜುಲೈ 2025 (18:57 IST)
Photo Credit X
ಗೋಣಿಕೊಪ್ಪಲು:  ಇಲ್ಲಿಗೆ ಸಮೀಪದ ರುದ್ರಬೀಡು ಗ್ರಾಮದಲ್ಲಿ ಮಂಗಳವಾರ ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅಜೇಶ್ (40) ಎಂಬುವವರು ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯ ಗುರುಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

‘ಮೊದಲಿಗೆ ಸೈಕಲ್‌ನಲ್ಲಿ ತೆರಳುತ್ತಿದ್ದ ಅಜೇಶ್‌ ಮೇಲೆ ಆನೆ ಎರಗಿದೆ. ಗಾಯಗೊಂಡ ಅವರು ದೂರ ಓಡಿ ತಪ್ಪಿಸಿಕೊಂಡರು. ನಂತರ, ಸಮೀಪದಲ್ಲೇ ಗಡ್ಡಧಾರಿ ವ್ಯಕ್ತಿಯೊಬ್ಬರು ನಡೆಯುತ್ತ ಹೋಗುತ್ತಿದ್ದರು. ಇವರನ್ನು ನೆಲಕ್ಕೆ ಬೀಳಿಸಿದ ಕಾಡಾನೆ ದಾಳಿ ನಡೆಸಿತು. ಇದರಿಂದ ಅವರು ಸ್ಥಳದಲ್ಲೆ ಕೊನೆಯುಸಿರೆಳೆದಿದ್ದಾರೆ. 

ಮೃತಪಟ್ಟ ವ್ಯಕ್ತಿಗೆ  ಅಂದಾಜು 45 ವರ್ಷದವರಾಗಿದ್ದು, ಸ್ಥಳೀಯರಿಗೆ ಪರಿಚಿತವಲ್ಲ ಎಂದು ತಿಳಿದುಬಂದಿದೆ. 

ಕಳೆದ 2–3 ದಿನಗಳಿಂದ ಇಲ್ಲಿ ಇವರು ಕಾಣಿಸಿಕೊಂಡಿದ್ದು, ಬಸ್‌ನಿಲ್ದಾಣದಲ್ಲಿ ಮಲಗುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಇವರ ಗುರುತು ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ. ತಪ್ಪಿಸಿಕೊಂಡ ಅಜೇಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಘಟನೆ ನಡೆದ ಕೂಡಲೇ ಸ್ಥಳದಲ್ಲಿ ಹುಡುಕಾಟ ನಡೆಸಿದಾಗ ಒಟ್ಟು 3 ಕಾಡಾನೆಗಳು ಪತ್ತೆಯಾಗಿವೆ. ಇವುಗಳ ಪೈಕಿ ಯಾವ ಕಾಡಾನೆ ದಾಳಿ ನಡೆಸಿತೆಂದು ಗೊತ್ತಾಗಿಲ್ಲ. ಈ ಮೂರೂ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆದಿದೆ ಎಂದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳದಲ್ಲಿ ಮಿದುಳು ತಿನ್ನುವ ಅಮೀಬಾ ಪತ್ತೆ, ಇದುವರೆಗೆ 41 ಪ್ರಕರಣ ದಾಖಲು

Video: ತಲಪಾಡಿಯಲ್ಲಿ ಕೆಎಸ್ ಆರ್ ಟಿಸಿ ಬಸ್ ದುರಂತ: ಆರು ಮಂದಿ ಸಾವು

ಶಿವಕುಮಾರ್ ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಲಿ: ವಿಜಯೇಂದ್ರ ಆಗ್ರಹ

ಮತದಾರರ ಅಧಿಕಾರ ಯಾತ್ರೆಯಲ್ಲಿ ಮೋದಿ ತಾಯಿಯ ವಿರುದ್ಧ ಅವಾಚ್ಯ ಶಬ್ದ: ಬಿಜೆಪಿ ಆರೋಪ

ಬೀದರ್‌; ಸ್ಲೀಪರ್‌ ಬಸ್‌ನಲ್ಲೇ ಆತ್ಮಹತ್ಯೆಗೆ ಶರಣಾದ ಬಸ್‌ ಚಾಲಕ, ಪರಿಹಾರಕ್ಕೆ ಆಗ್ರಹ

ಮುಂದಿನ ಸುದ್ದಿ
Show comments