ಬೆಂಗಳೂರು: ಚಿನ್ನ ಖರೀದಿಸಿ ವಂಚಿಸಿದ ಪ್ರಕರಣದಲ್ಲಿ ಆರೋಪಿ ಶ್ವೇತಾಗೂ ರೇಣುಕಾಸ್ವಾಮಿ ಹತ್ಯೆ ಆರೋಪಿ ಪವಿತ್ರಾ ಗೌಡಗೂ ನಂಟಿದೆ ಎಂಬ ವಿಚಾರ ಕೇಳಿಬರುತ್ತಿದೆ.
ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಜೊತೆ ಗೋಲ್ಡ್ ಶ್ವೇತಾ ನಂಟು ಹೊಂದಿದ್ದಾರೆ ಎಂಬುದಕ್ಕೆ ಪುರಾವೆಯೂ ಸಿಕ್ಕದೆ. ಈ ಹಿಂದೆ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿದ್ದಾಗ ಶ್ವೇತಾ ಕೂಡಾ ಪವಿತ್ರಾ ಸ್ನೇಹಿತೆ ಸಮತಾ ಜೊತೆಗೆ ಬಂದಿದ್ದರು ಎನ್ನಲಾಗಿದೆ.
ಹೀಗಾಗಿ ಪವಿತ್ರಾ ಗೌಡಗೂ ಶ್ವೇತಾ ಜೊತೆ ಸ್ನೇಹವಿತ್ತು ಎನ್ನಲಾಗಿದೆ. ಈ ಹಿಂದೆ ಪವಿತ್ರಾ ಗೌಡ ಪ್ರಕರಣದಲ್ಲಿ ಸಮತಾರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಇದೀಗ ಗೋಲ್ಡ್ ವಂಚನೆ ಕೇಸ್ ನಲ್ಲೂ ಸಮತಾಗೆ ಪಾತ್ರವಿದೆಯೇ ಎಂದು ಪೊಲೀಸರು ತನಿಖೆ ನಡೆಸುವ ಸಾಧ್ಯತೆಯಿದೆ.
ಈ ಹಿಂದೆ ಶ್ವೇತಾ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟಿದ್ದರಿಂದ ಪವಿತ್ರಾ ಗೌಡರನ್ನೂ ಈ ಪ್ರಕರಣದಲ್ಲಿ ಪೊಲೀಸರು ವಿಚಾರಣೆಗೊಳಪಡಿಸಿದರೂ ಅಚ್ಚರಿಯಿಲ್ಲ. ಈಗಾಗಲೇ ರೇನುಕಾಸ್ವಾಮಿ ಪ್ರಕರಣ ಪವಿತ್ರಾಗೆ ಉರುಳಾಗಿದೆ. ಇದರ ಬೆನ್ನಲ್ಲೇ ಶ್ವೇತಾ ಜೊತೆಗಿನ ನಂಟು ಸಂಕಷ್ಟ ತಂದೊಡ್ಡಲಿದೆ.