ಬೇಡ ಸಮುದಾಯಕ್ಕೆ ಸೇರಿದ್ದ ವಾಲ್ಮೀಕಿ, ಕ್ಷತ್ರಿಯ ಸಮದಾಯಕ್ಕೆ ಸೇರಿದ್ದ ಶ್ರೀ ರಾಮ ಹಾಗೂ ಶ್ರೀಕೃಷ್ಣ ಮಾಂಸಾಹಾರಿಗಳಾಗಿದ್ದರು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಾದ್ವರಾಜ್ ಹೇಳಿದರು.
ಉಡುಪಿ ಜಿಲ್ಲಾಡಳಿತದ ವತಿಯಿಂದ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ವಾಲ್ಮೀಕಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ದೇಶಾದ್ಯಂತ ಆಹಾರ ಪದ್ಧತಿಯ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಶ್ರೀ ರಾಮ ಹಾಗೂ ಶ್ರೀಕೃಷ್ಣರು ಸಹ ಮಾಂಸಾಹಾರಿಗಳೇ ಆಗಿದ್ದರು. ದೇಶದಲ್ಲಿ ಅನೇಕ ವಿದ್ವಾಂಸರು ಇದ್ದಾರೆ ಈ ಕುರಿತು ಚರ್ಚೆಯಾಗಲಿ ಎಂದರು.
ಮಹಾ ಸಾಧನೆ ಮಾಡಲು ಜಾತಿ ಮುಖ್ಯವಲ್ಲ. ಮಹಾಭಾರತ ಬರೆದ ವ್ಯಾಸರಾಯರು ಮದುವೆಯಾಗದ ಮೀನುಗಾರ ಮಹಿಳೆಯ ಮಗ. ಈ ಕಾಲದಲ್ಲಿ ಅಂತವರು ಇರುತ್ತಿದ್ದರೆ ಸಮಾಜವು ಬಹಿಷ್ಕಾರ ಹಾಕುತ್ತಿತ್ತು. ಜಾತಿ ಬಗ್ಗೆ ಮಾತನಾಡಲು ನಮಗೆ ಮಾತ್ರ ಅಧಿಕಾರ ಹಾಗೂ ಪೂಜೆ ಮಾಡುವುದು ನಮಗೆ ಮಾತ್ರ ಹಕ್ಕು ಎಂದು ಹೇಳಿಕೊಳ್ಳುವವರಿಗೆ ಪುರಾಣ, ಇತಿಹಾಸಗಳು ಕಣ್ಣು ತೆರೆಸುತ್ತದೆ ಎಂದು ಸಚಿವ ಪ್ರಮೋದ್ ಮಾದ್ವರಾಜ್ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ