ಸನ್ನಿ ಲಿಯೋನ್ ನಟನೆಯ ಕಾಂಡೋಮ್ ಜಾಹೀರಾತಿಗೆ ವಿರೋಧ ವ್ಯಕ್ತಪಡಿಸಿದ ಗೋವಾ ಕಾಂಗ್ರೆಸ್ ಶಾಸಕ

ಶನಿವಾರ, 10 ನವೆಂಬರ್ 2018 (07:11 IST)
ಮುಂಬೈ : ಬಾಲಿವುಡ್ ನ ಹಾಟ್ ನಟಿ ಸನ್ನಿ ಲಿಯೋನ್ ನಟಿಸುತ್ತಿದ್ದ ಕಾಂಡೋಮ್ ಜಾಹೀರಾತಿನ ಬಗ್ಗೆ ಈ ಹಿಂದೆ ಬಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಇದೀಗ ಮತ್ತೆ ಈ  ಕಾಂಡೋಮ್ ಕುರಿತು ವಿರೋಧ ವ್ಯಕ್ತವಾಗುತ್ತಿದೆ.

ಸನ್ನಿ ಲಿಯೋನ್ ಕೆಲ ವರ್ಷಗಳಿಂದ ಮ್ಯಾನ್ಫೋರ್ಸ್ ಕಾಂಡೋಮ್ ರಾಯಭಾರಿಯಾಗಿದ್ದಾರೆ. ಈ ಕಂಪನಿಯ ಕೆಲ ಜಾಹೀರಾತುಗಳಲ್ಲಿಯೂ ಸನ್ನಿ ಕಾಣಿಸಿಕೊಂಡಿದ್ದಾರೆ. ಆದರೆ ಇದೀಗ ಗೋವಾದ ಕಾಂಗ್ರೆಸ್ ಶಾಸಕ, ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

 

ಗೋವಾದ ಸಾರಿಗೆ ಬಸ್ ಮೇಲೆ ಕಾಂಡೋಮ್ ಗಳ ಜಾಹೀರಾತಿನ ಚಿತ್ರವಿದೆ. ಇದನ್ನು ವಿರೋಧಿಸಿರುವ ಶಾಸಕ ಸಿಲ್ವೇರಿಯಾ ಈ ಜಾಹೀರಾತು ಮುಜುಗರ ತರಿಸುತ್ತದೆ. ಬಸ್ ನಲ್ಲಿ ಈ ಕಾಂಡೋಮ್ ಜಾಹೀರಾತು ಬೇಡ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಈ ಜಾಹೀರಾತು ಗೋವಾ ಜನರಿಗೆ ಏನು ಕಲಿಸುತ್ತಿದೆ. ವಿದ್ಯಾರ್ಥಿಗಳು ಬಸ್ ನಲ್ಲಿ ಸಂಚರಿಸುತ್ತಾರೆ. ವಿದ್ಯಾರ್ಥಿಗಳು ಹಾಗೂ ಜನರಿಗೆ ಈ ಜಾಹೀರಾತು ತಪ್ಪು ಸಂದೇಶ ರವಾನೆ ಮಾಡುತ್ತಿದೆ ಎಂದು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಂಬಳ ಕೊಡದಿದ್ದಕ್ಕೆ ಮಾಲೀಕನ ಮಗಳನ್ನೇ ಹಾರಿಸಿಕೊಂಡು ಹೋದ ಯುವಕ ಅರೆಸ್ಟ್